ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ವರುಣ ರೌದ್ರಾವತಾರ ತಾಳಿರುವ ಪರಿಣಾಮ ಬೆಳಗಾವಿಯಲ್ಲಿ ಪ್ರವಾಹದ ಸ್ಥಿತಿ ಎದುರಾಗಿದೆ. ಇತ್ತ ಬೆಳಗಾವಿ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ನೆರೆ ಪರಿಸ್ಥಿತಿ ನಿಯಂತ್ರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರವಾಹ, ಕೋವಿಡ್ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಈ ಕುರಿತು ಮಾತನಾಡಿರುವ ಅವರು ಜಿಲ್ಲೆಯಲ್ಲಿ ಇನ್ನೂ ಪ್ರವಾಹ ಸ್ಥಿತಿ ನಿರ್ಮಾಣವಾಗಿಲ್ಲ, ಹೀಗೇ ಮಳೆ ಮುಂದುವರೆದರೆ ಪ್ರವಾಹ ಎದುರಾಗಲಿದೆ. ಈ ಸಂಬಂಧ ಮುಖ್ಯಮಂತ್ರಿಗಳು ನನ್ನ ಜೊತೆ ನಾಲ್ಕು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಚರ್ಚೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನನ್ನ ಜೊತೆ ಮಾತನಾಡಿದ್ದಾರೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರವಾಹದಿಂದ ಅವಾಂತರ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೊಯಿನಾ ಡ್ಯಾಂ ನೀರಿನ ಮಟ್ಟದ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಸಚಿವರು 1 ಲಕ್ಷ 80 ಸಾವಿರದಿಂದ 2 ಲಕ್ಷ ಕ್ಯೂಸೆಕ್ ವರೆಗೂ ಕೃಷ್ಣಾ ನದಿಗೆ ನೀರು ಹರಿದು ಬಂದ್ರೆ ಅಪಾಯ ಎದುರಾಗಲಿದೆ. ಯಾವುದೇ ರೀತಿಯ ಪ್ರವಾಹ ಸ್ಥಿತಿ ಎದುರಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿರುವೆ. ನಾಳೆ ನಾನೇ ಚಿಕ್ಕೋಡಿ ವಿಭಾಗದ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವೆ. ಅಲ್ಲದೇ ಗಂಜಿ ಕೇಂದ್ರಗಳನ್ನೂ ಸಹ ತೆರೆಯಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ನೆರೆ ಪರಿಸ್ಥಿತಿ ಎದುರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ರಮೇಶ್ ಜಾರಕಿಹೊಳಿ ಅವರು ವಿವರಿಸಿದ್ದಾರೆ.
ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ
ಜಾಮ್‌ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...








