ನಾನು 17 ಶಾಸಕರ ನಾಯಕನಲ್ಲ : ಮಿತ್ರಮಂಡಳಿಗೆ `ಸಾಹುಕಾರ್’ ಶಾಕ್
ಬೆಂಗಳೂರು : ನಾನು 17 ಶಾಸಕರ ನಾಯಕ ಅಲ್ಲ. ಅವರು ಪರ್ಯಾಯ ಸಭೆ ನಡೆಸುವುದು ಬಂದ್ ಆಗಲಿ ಎಂದು ಹೇಳುವ ಮೂಲಕ ಸಚಿವ ರಮೇಶ್ ಜಾರಕಿಹೊಳಿ ಮಂತ್ರಿಮಂಡಳಿಗೆ ಟಾಂಗ್ ನೀಡಿದ್ದಾರೆ.
ಇಂದು ತಮ್ಮ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ದೆಹಲಿ ಭೇಟಿ ಬಗ್ಗೆ ಮಾಹಿತಿ ನೀಡಿದರು.
ದೆಹಲಿಯಲ್ಲಿ ಕೇಂದ್ರ ಸಚಿವರ ಜೊತೆ ನಡೆದ ಚರ್ಚೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದೇನೆ. ದೆಹಲಿಯಲ್ಲಿ ಸಿಟಿ ರವಿ ಆಫೀಸ್ ಪೂಜೆಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಲಸಿಗರ ಸಭೆ ಬಗ್ಗೆ ಮಾತನಾಡಿದ ಅವರು, ಸಭೆಯಲ್ಲಿ ನನ್ನ ಬಗ್ಗೆ ಚರ್ಚೆ ಆಗಿರೋದು ನನಗೆ ಗೊತ್ತಿಲ್ಲ. ನನ್ನದೇನಿದರೂ ಇಲಾಖೆಯ ಕೆಲಸದ ಕಡೆ ಗಮನ ಕೊಡೋದು.
ಪರ್ಯಾಯ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಸಭೆಯಲ್ಲಿ ಏನಾಯ್ತು ಅಂತ ಕೇಳಿ ಸಣ್ಣವನಾಗಲ್ಲ. ಸಭೆ ನಡೆಸಿದವರೇ ಹೇಳಲಿ. ಈ ರೀತಿಯ ಸಭೆ ನಡೆಸುವುದು ಬಂದ್ ಆಗಬೇಕು.
ಇದು ಶಿಸ್ತಿನ ಪಕ್ಷ, ಇಲ್ಲಿ ಸಿಎಂ ನಿರ್ಧಾರವೇ ಅಂತಿಮ ಎಂದು ಹೇಳುವ ಮೂಲಕ ಮಿತ್ರಮಂಡಳಿಗೆ ಶಾಕ್ ನೀಡಿದರು. ನಾವು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ಕೊಡಲ್ಲ : ಈಶ್ವರಪ್ಪ
ಇನ್ನು ನಾನು 17 ಶಾಸಕರ ನಾಯಕ ಅಲ್ಲ ಎಂದು ಹೇಳಿದ ರಮೇಶ್ ಜಾರಕಿಹೊಳಿ, ನಮ್ಮದು ಸಾಮೂಹಿಕ ನಾಯಕತ್ವ. ಸರ್ಕಾರ ರಚನೆಗೆ ಕಾರಣವಾದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು, ಅದು ನಮ್ಮ ಒತ್ತಾಯವಾಗಿದೆ.
ಆದರೆ ಕೆಲವೊಂದು ವಿಚಾರವನ್ನು ನಾನು ಬಹಿರಂಗವಾಗಿ ಹೇಳಲು ಆಗಿಲ್ಲ. ಸಿಎಂ ಹಾಗೂ ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೇವೆ. ಸಂತೋಷ್ ಆತ್ಮಹತ್ಯೆ ಯತ್ನಕ್ಕೆ `ಆ ವಿಡಿಯೋ’ ಕಾರಣ..? ಬಾಂಬ್ ಸಿಡಿಸಿದ ಡಿಕೆಶಿ..!
ನಮ್ಮದು ಸಾಮೂಹಿಕ ನಾಯಕತ್ವ, ಸಾಮೂಹಿಕ ನಾಯಕತ್ವದಲ್ಲೇ ನಾವು ಬಿಜೆಪಿಗೆ ಬಂದಿದ್ದು ನಾನು ನಾಯಕ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel