Ramesh kumar | ಕಲಬುರ್ಗಿಯವರನ್ನ ಮುಸ್ಲಿಮರು ಅಂತ ಕೊಂದ್ರಾ..?
ವಿಜಯಪುರ : ಕಲಬುರ್ಗಿಯವರನ್ನ ಅವರೇನು ಮುಸ್ಲಿಮರು ಅಂತ ಕೊಂದ್ರಾ..? ಕ್ರೈಸ್ತರಂತ ಕೊಂದ್ರಾ..? ಬಸವಣ್ಣನವರ ಅನುಯಾಯಿ, ಮನುಧರ್ಮದ ವಿರೋಧಿ ಅಂತ ಕೊಂದ್ರು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಮೇಶ್ ಕುಮಾರ್, ಕಲಬುರ್ಗಿಯವರನ್ನ ಅವರೇನು ಮುಸ್ಲಿಂರು ಅಂತ ಕೊಂದ್ರಾ..? ಕ್ರೈಸ್ತರಂತ ಕೊಂದ್ರಾ..?
ಬಸವಣ್ಣನವರ ಅನುಯಾಯಿ, ಮನುಧರ್ಮದ ವಿರೋಧಿ ಅಂತ ಕೊಂದ್ರು. ಕೊಲ್ಲಲಿಕ್ಕೆ ಒಂದು ಕಾರಣ ಬೇಕಲ್ಲಾ.
ನನ್ನದು ನಿನ್ನದು ಆಸ್ತಿ ವ್ಯವಹಾರವಿದ್ರೆ, ಆಸ್ತಿಗಾಗಿ ಅಥವಾ ಹೆಣ್ಣು ಮಕ್ಕಳ ತಂಟೆಗೆ ಬಂದ್ರೆ. ಆದ್ರೆ ಕಲಬುರ್ಗಿಯವರನ್ನು ಯಾಕೆ ಕೊಂದ್ರಿ…?
ಯಾರು ಮನುವಾದಿಗಳಿದ್ದಾರೆಯೇ, ಮುಖವಾಡ ಹಾಕಿಕೊಂಡಿದ್ದೀರಿ. ಸಾಂಪ್ರದಾಯಿಕ ವಾರಸುದಾರರು ಅಂತೀರಿ.
ಭಾರತ ಮಾತೆಯ ಮಕ್ಕಳು ಅಂತೀರಿ. ನೀವು ಕೊಂದ್ರಿ ಎಂದು ಪರೋಕ್ಷವಾಗಿ ಮನುವಾದಿಗಳ ವಿರುದ್ಧ ರಮೇಶ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ನೀವು ಒಂದು ದಿವಸ ಒಳ್ಳೆ ಸ್ಥಾನಕ್ಕೆ ಬರಬೇಕು ಅಂತ ಆಸೆ ಎಂದು ಎಂ ಬಿ ಪಾಟೀಲ್ ಮುಖ್ಯಮಂತ್ರಿ ಆಗಲಿ ಎಂದು ಪರೋಕ್ಷವಾಗಿ ರಮೇಶ್ ಕುಮಾರ್ ಹೇಳಿದರು.








