Ramesh Kumar | ಮಾಧ್ಯಮಗಳಿಂದ ವಿವಾದ ಸೃಷ್ಠಿಯಾದ್ರೆ ನಾನೇನು ಮಾಡಲಿ
ವಿಜಯಪುರ : ಮಾಧ್ಯಮಗಳಿಂದ ವಿವಾದ ಸೃಷ್ಠಿಯಾದ್ರೆ ನಾನೇನು ಮಾಡಲಿ, ನೀವೂ ಕಟ್ ಅಂಡ್ ಪೇಸ್ಟ್ ಮಾಡಿದ್ರೆ ನಾನು ಏನು ಮಾಡಲಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
3-4 ತಲೆಮಾರಿಗೆ ಆಗುವಷ್ಟು ಮಾಡಿದ್ದೇವೆ ಋಣಭಾರ ತೀರಿಸಬೇಕು ಎಂಬ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ರಮೇಶ್ ಕುಮಾರ್, ಮಾಧ್ಯಮಗಳಿಂದ ವಿವಾದ ಸೃಷ್ಠಿಯಾದ್ರೆ ನಾನೇನು ಮಾಡಲಿ. ನೀವೂ ಕಟ್ ಆಂಡ್ ಪೇಸ್ಟ್ ಮಾಡಿದ್ರೆ ನಾನು ಏನು ಮಾಡಲಿ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದರು.

ಗಾಂಧಿ, ನೆಹರು ಬಗ್ಗೆ ಮಾತನಾಡಿದ್ದೇನೆ. ನಾನು ನನ್ನ ಭಾಷಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡಿದ್ದೇನೆ. ಯಾರ್ ಯಾರು ಬಲಿದಾನ ಆಗಿದೆ ಅನ್ನೋದು ಹೇಳಿದ್ದೇನೆ. ಇಷ್ಟೆಲ್ಲಾ ಇದ್ದಾಗ ನಾವೆಲ್ಲಾ ಅವರ (ಗಾಂಧಿ ಕುಟುಂಬ) ಫಲಾನುಭವಿಗಳಿದ್ದೇವೆ. ನಾವೆಲ್ಲಾ ಋಣ ತೀರಿಸಬೇಕು ಎಂದಿದ್ದೇನೆ. ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವನು, ನಾನು 6 ಬಾರಿ ಶಾಸಕನಾಗಿದ್ದೇನೆ, ಎರಡು ಬಾರಿ ಸ್ಪೀಕರ್ ಆಗಿದ್ದೇನೆ. ಸಚಿವನಾಗಿದ್ದೇನೆ ಇದು ನನಗೂ ಕೂಡಾ ಕೀರ್ತಿ, ಸಂಪಾದನೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ.
ಏನು ಸಂಪಾದನೆ ಅಂದ್ರೆ ದುಡ್ಡಾ, ನಾನು ದುಡ್ಡು ಮಾಡಿದ್ದಾರೆ ಅಂತ ನಾನು ಹೇಳಿದ್ನಾ..? ಅವರು ಇವರು ದುಡ್ಡು ಮಾಡಿದ್ದಾರೆ ಅಂತ ಹೇಳಿದ್ನಾ..? ಇದೆಲ್ಲಾ ಮಾಧ್ಯಮಗಳ ಕೆಲಸ, ನನ್ನ ಕೆಲಸ ಭಾವಾನಾತ್ಮಕವಾಗಿ ನಾವು ಕಾಂಗ್ರೆಸ್ ನಿಂದ ಜೀವನದಲ್ಲಿ ಒಂದು ಸ್ಥಾನಕ್ಕೆ ಬಂದಿದ್ದೇವೆ. ನಾವೆಲ್ಲರೂ ಸೇರಿ ಪಕ್ಷದ ಋಣ ತೀರಿಸಬೇಕು. ಅವರು ಆಪತ್ತಿನಲ್ಲಿದ್ದಾರೆ ಎಂದು ಹೇಳಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.








