ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಟಾಕ್‍ವಾರ್ ತಾರಕಕ್ಕೇರಿದೆ.
ಬೆಳಗಾವಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರದ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಟಾಂಗ್ ಕೊಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಂಯೆ ನೀಡಿರುವ ಸಚಿವ ರಮೇಶ್ ಜಾರಕಿಹೊಳಿ, ಸಭೆ ಕರೆದಿದ್ದು ಬೆಳಗಾವಿ ತಾಲೂಕಿನ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಕುರಿತು. ಪಾಲಿಕೆ, ಸ್ಮಾರ್ಟ್ ಸಿಟಿ ಬಗ್ಗೆ ಚರ್ಚಿಸಲು ಬೇರೆ ವೇದಿಕೆಯಿದೆ. ಸಿಎಂ ಯಡಿಯೂರಪ್ಪ ಸರ್ಕಾರ ಯಾವುದೇ ಪಕ್ಷ ಜಾತಿ ನೋಡಿ ಕೆಲಸ ಮಾಡಲ್ಲ. ಬರೀ ಲೇಟರ್ ಕೊಟ್ಟು ಮಿಟಿಂಗ್ ಮಾಡಿ ಶೋ ಮಾಡುವ ಪಕ್ಷ ನಮ್ಮದಲ್ಲ. ಬುದ್ಧಿ ಇರುವಂತಹವರು ಚಾಲೆಂಜ್ ಮಾಡುತ್ತಾರೆ. ನಾವು ಬಿಜೆಪಿ, ಕಾಂಗ್ರೆಸ್ ಜನಪ್ರತಿನಿದಿಗಳು ಅಲ್ಲ. ನಾವು ಸರ್ಕಾರದ ಪ್ರತಿನಿಧಿಗಳು. ಕೊಳಚೆಯಲ್ಲಿ ಕಲ್ಲು ಹೊಡೆದ್ರೆ ಏನಾಗುತ್ತೇ ರೀ ಎಂದು ಮರು ಪ್ರಶ್ನೆ ಮಾಡಿದ್ದಾರೆ.
`ಕೊಳಚೆ, ಕಲ್ಲು ಬಗ್ಗೆ ಮಾತನಾಡಲ್ಲ’
ಕೊಳಚೆ ಮೇಲೆ ಕಲ್ಲು ಹೊಡೆಯೋಕೆ ಹೋಗಲ್ಲ ಎಂದಿರುವ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಲಕ್ಷ್ಮಿ ಹೆಬ್ಬಾಳಕರ್ ಖಡಕ್ಕಾಗೇ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಬಡರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಮಾಡಿದ್ದಾರೆ. ಯಾವುದೇ ಫೋಟೋಗೊಸ್ಕರ ಮಾಡಿಲ್ಲ ಅಂತಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳ್ದೆ. ಜಿಲ್ಲಾ ಮಂತ್ರಿಗಳು ಅದನ್ನ ನನಗೆ ಅಂದಿದ್ದಾರೆ ಅಂತಾ ಯಾಕ್ ಅನ್ನಕೊಳ್ಳಲಿ. ಅಂದು ಆಧಾರ್ ಕಾರ್ಡಗೆ, ಎಫ್‍ಡಿಐಗೆ, ಆರ್‍ಟಿಇ, ಆರ್‍ಟಿಐಗೆ ವಿರೋಧ ಮಾಡಿದ್ರಿ. ಈಗ ಅದನ್ನೇ ಜಾರಿ ಮಾಡ್ತಿದ್ದಿರಿ. 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಬಾಯಿ ಬಡ್ಕೊತಿದ್ದಾರೆ. ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ. ಕೊಳಚೆಯಲ್ಲಿ ಕಲ್ಲು ಹೊಡೆಯಲ್ಲ ಎಂದ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಪರೋಕ್ಷ ಟಾಂಗ್ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ತಮ್ಮ ರಾಜಕೀಯ ಶಕ್ತಿ ತೋರಿಸ್ತಿನಿ ಹೇಳಿಕೆಗೆ ಪ್ರತಿಕ್ರಿಯಿದ ಲಕ್ಷ್ಮೀ ಹೆಬ್ಬಾಳಕರ್, ಆಹ್ವಾನ ಕೊಟ್ಟಿದ್ದಾರೆ, ನಾನು ಅದನ್ನ ಸ್ಬೀಕಾರ ಮಾಡ್ತಿನಿ. ಬೆಳಗಾವಿ ಎಪಿಎಂಸಿ ಚುನಾವಣೆ ಕಾಂಗ್ರೆಸ್ ಗೆ ಮೈಲುಗೈ ಆಗಿದೆ. ಇದು ಬಿಜೆಪಿಯವರಿಗೆ ಮುಖಭಂಗ ಎಂದು ತಿರುಗೇಟು ನೀಡಿದ್ದಾರೆ








