ರಮೇಶ್ ಜಾರಕಿಹೊಳಿ & ವಲಸಿಗರಿಗೆ ಬಿಜೆಪಿ ಶಾಕ್
ಬೆಂಗಳೂರು : ಭಾರತೀಯ ಜನತಾ ಪಾರ್ಟಿ ರಾಜ್ಯದ 20 ಸ್ಥಳೀಯ ಸಂಸ್ಥೆಗಳ 25 ವಿಧಾನ ಪರಿಷತ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಆದ್ರೆ ಈ ಪೈಕಿ ಅವಕಾಶದ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಬಿಜೆಪಿ ಶಾಕ್ ನೀಡಿದೆ.
ಮುಖ್ಯವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಹಿನ್ನಡೆಯಾದಂತೆ ಕಾಣುತ್ತಿದೆ.
ಯಾಕಂದರೇ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೀವ್ರ ಲಾಭೀ ನಡೆಸಿದ್ದರು. ಆದ್ರೆ ಇದಕ್ಕೆ ಹೈಕಮಾಂಡ್ ಮಣೆ ಹಾಕಿಲ್ಲ.
ಇದಲ್ಲದೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ವಲಸಿಗ ಸಂದೇಶ ನಾಗರಾಜ್ ಮತ್ತು ಸಿ.ಆರ್.ಮನೋಹರ್ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿಲ್ಲ.
ಅಭ್ಯರ್ಥಿಗಳ ಹೆಸರು:
ಬೆಂಗಳೂರು: ಹೆಚ್ ಎಸ್ ಗೋಪಿನಾಥ ರೆಡ್ಡಿ
ಮಂಡ್ಯ: ಮಂಜು ಕೆ ಆರ್ ಪೇಟೆ
ಕೋಲಾರ: ಕೆಎನ್ ವೇಣುಗೋಪಾಲ್,
ಚಿಕ್ಕಮಗಳೂರು: ಎಂಕೆ ಪ್ರಾಣೇಶ್
ಶಿವಮೊಗ್ಗ: ಡಿಎಸ್ ಅರುಣ್
ಧಾರವಾಡ: ಪ್ರದೀಪ್ ಶೆಟ್ಟರ್
ಬೆಳಗಾವಿ: ಮಹಾಂತೇಶ್ ಕವಟಗಿಮಠ
ರಾಯಚೂರು: ವಿಶ್ವನಾಥ್ ಬನಹಟ್ಟಿ
ಬೆಂಗಳೂರು ಗ್ರಾಮಾಂತರ: ಬಿ ಎಂ ನಾರಾಯಣಸ್ವಾಮಿ
ಬಳ್ಳಾರಿ: ವೈಎಂ ಸತೀಶ್
ತುಮಕೂರು: ಎಂ ಲೋಕೇಶ್
ಕೊಡಗು: ಸುಜಾಕುಶಾಲಪ್ಪ
ದಕ್ಷಿಣ ಕನ್ನಡ: ಕೋಟ ಶ್ರೀನಿವಾಸ ಪೂಜಾರಿ
ಕಲಬುರಗಿ: ಬಿಜಿ ಪಾಟೀಲ್
ಚಿತ್ರದುರ್ಗ: ಕೆ.ಎಸ್.ನವೀನ್
ಮೈಸೂರು: ರಘು ಕೌಟಿಲ್ಯ
ಹಾಸನ: ವಿಶ್ವನಾಥ್
ಉತ್ತರ ಕನ್ನಡ: ಗಣಪತಿ ಉಳ್ವೇಕರ್
ಬೀದರ್: ಪ್ರಕಾಶ್ ಖಂಡ್ರೆ
ವಿಜಯಪುರ: ಪಿಹೆಚ್ ಪೂಜಾರ್ಬೆಳಗಾವಿ









