ಹಿಂದೂ ಹಾಗೂ ಹಿಂದುತ್ವದ ವ್ಯತ್ಯಾಸದ ಬಗ್ಗೆ ಮಾತನಾಡಿದ ಮೋಹಕ ತಾರೆ ರಮ್ಯಾ..!
ಬೆಂಗಳೂರು : ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಕೆಲ ವರ್ಷಗಳಿಂದ ಸಿನಿಮಾ ಕ್ಷೇತ್ರ ಹಾಗೂ ರಾಜಕೀಯದಿಂದಲೂ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ.. ಆದ್ರೆ ಆಗಾಗ ಅವರು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟ್ ಗಳನ್ನ ಮಾಡುತ್ತಾ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ತಾರೆ.. ಕೆಲವೊಮ್ಮೆ ಕೆಲವು ವಿಚಾರಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನ ಹೊರಹಾಕ್ತಿರುತ್ತಾರೆ..
ಅದೇ ರೀತಿ ಇದೀಗ ರಮ್ಯಾ ಹಿಂದುತ್ವದ ಬಗ್ಗೆ ಮಾತನಾಡಿದ್ದಾರೆ.. ಅಂದ್ಹಾಗೆ ರಮ್ಯಾ ಬಿಜೆಪಿ ವಿರೋಧಿ ಎನ್ನುವುದನ್ನ ನಾವು ಮತ್ತೊಮ್ಮೆ ಯೋಚಿಸದೇ ಒತ್ತಿ ಹೇಳಬಹುದು.. ಅವರು ಸದಾ ಬಿಜೆಪಿ ಸಿದ್ಧಾಂತವನ್ನ ವಿರೋಧಿಸಿಕೊಂಡೇ ಬಂದಿದ್ದಾರೆ.. ಇದೀಗ ಮತ್ತೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ರಮ್ಯಾ ಹಿಂದೂ ಮತ್ತು ಹಿಂದುತ್ವಕ್ಕೂ ಇರುವ ವ್ಯತ್ಯಾಸದ ಬಗ್ಗೆ ಬರೆದುಕೊಂಡು ಧರ್ಮದ ಆಧಾರದಲ್ಲಿ ಮಾಡುವ ರಾಜಕೀಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..
‘ಹಿಂದುಯಿಸಂ ಮತ್ತು ಹಿಂದುತ್ವ ಎರಡೂ ಒಂದೇ ಅಲ್ಲ.. ಹಿಂದು ರಾಜಕೀಯ ರಹಿತವಾದದ್ದು.. ಆದ್ರೆ ಹಿಂದುತ್ವದಲ್ಲಿ ರಾಜಕೀಯವಿದೆ. ಹಿಂದೂ ಅಂದ್ರೆ ಎಲ್ಲರನ್ನು ಒಳಗೊಳ್ಳುವುದು.. ಎಲ್ಲರನ್ನೂ ಪ್ರೀತಿ ಮಾಡುವುದು.. ಆದ್ರೆ ಹಿಂದುತ್ವ ಇದಕ್ಕೆ ವಿರುದ್ಧವಾಗಿದೆ.. ನಿಜವಾದ ಹಿಂದೂವಾದವವನು ಎರಡರ ನಡುವಿನ ಅಂತರವನ್ನು ಗುರುತಿಸುತ್ತಾನೆ’ ಎಂದಿದ್ದಾರೆ..
ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ “ಬಿಗ್ ಬಾಸ್ ‘ಪ್ರಣಯ ಪಕ್ಷಿಗಳು”..!
ಹೊಸ ದಾಖಲೆ ಬರೆದ “ರಾಜಕುಮಾರ”ನ ಬೊಂಬೈ ಹೇಳುತೈತೆ ಹಾಡು..!
ಶರ್ಟ್ ಲೆಸ್ ಹುಡುಗರು ‘ಕಿರಿಕ್ ಹುಡುಗಿ’ಗೆ ಇಷ್ಟ ಆಗಲ್ವಂತೆ..!