Ramya : ಮದುವೆ ಆಗಲ್ಲ…!!! ಎಂದ ಮೋಹಕ ತಾರೆ..!!
ಸ್ಯಾಂಡಲ್ ವುಡ್ ನಟಿ ಮೋಹಕ ತಾರೆ ರಮ್ಯಾ ಇದೀಗ ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಸಿನಿಮಾದ ಮೂಲಕ ಅದ್ಧೂರಿಯಾಗಿ ಕಮ್ ಬ್ಯಾಕ್ ಮಾಡ್ತಿದ್ದು , ಇದು ಅಧಿಕೃತವೂ ಆಗಿದೆ.. ಸ್ಯಾಂಡಲ್ ವುಡ್ ಕ್ವೀನ್ ಕಮ್ ಬ್ಯಾಕ್ ಗಾಗಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಅಂದ್ಹಾಗೆ ರಮ್ಯಾಗೆ 40 ವರ್ಷ ಸಮೀಪಿಸಿದೆಯಾದ್ರೂ ಅವರಿನ್ನೂ ಮದುವೆಯಾಗಿಲ್ಲ.. ಹೀಗಾಗಿ ಆಗಾಗ ಅವರ ಮದುವೆಯ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ.. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ರಮ್ಯಾ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ..
ಇತ್ತೀಚೆಗೆ ಬೆಂಗಳೂರು ಕಾಲೇಜುವೊಂದರಲ್ಲಿ ರಮ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ನೆಚ್ಚಿನ ನಟಿ ರಮ್ಯಾಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ.
ಆಗ ವಿದ್ಯಾರ್ಥಿಗಳು ಮದುವೆ ಯಾಕೆ ಆಗಬೇಕು ಎಂಬುದು ಅರ್ಥವಾಗುತ್ತಿಲ್ಲ.?? ಅದೇ ನಾವು ಹೇಳುತ್ತಿರೋದು ಮದುವೆ ಆಗಬೇಡಿ. ಅದೇ ನಮಗೆ ಬೇಕಾಗಿರೋದು ಎಂದು ಹೇಳಿದ್ದಾರೆ.. ಅದಕ್ಕೆ ಮದುವೆ ಆಗಬಾರದು ಅಲ್ವಾ ಯೆಸ್ ಆಗಲ್ಲಾ ಎಂದಿದ್ದಾರೆ ರಮ್ಯಾ.
ಹ್ಯಾಪಿಯಾಗಿರೋದು ಅಥವಾ ಮದುವೆ ಎರಡರಲ್ಲಿ ಒಂದನ್ನ ಚೂಸ್ ಮಾಡಬೇಕು. ಅದಕ್ಕೆ ನಾನು ಹ್ಯಾಪಿಯಾಗಿರೋದನ್ನ ಚ್ಯೂಸ್ ಮಾಡ್ತೀನಿ ಎಂದಿದ್ದಾರೆ. ನಾನು ಮದುವೆ ಆಗಲ್ಲಾ ಎಂದು ರಮ್ಯಾ ಹೇಳಿದ್ದಾರೆ.
Ramya: I won’t get married… said the charming star..!!