Ramya : ಸ್ವಾತಿ ಮುತ್ತಿನ ಮಳೆ ಹನಿಯೇ ಬಿಡುಗಡೆಗೆ ಕಾನೂನಿನ ತಡೆ…
ಮೋಹಕತಾರೆ ರಮ್ಯಾ ಬಂಡವಾಳ ಹೂಡುತ್ತಿರುವ ಚೊಚ್ಚಲ ಸಿನಿಮಾ ‘ ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗೆ ಇದೀಗ ಕಾನೂನಿನ ಸಂಕಷ್ಟ ಎದುರಾಗಿದೆ.. ಈ ಮೂಲಕ ರಮ್ಯಾ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ… ಅಂದ್ಹಾಗೆ ಟೈಟಲ್ ಮೂಲಕವೇ ಸಿನಿಮಾ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ…ಇದೀಗ ಇದೇ ಟೈಟಲ್ ಗೆ ಸಂಕಷ್ಟ ಎದುರಾಗಿದೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ಬಳಸದಂತೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಡೆ ನೀಡಿದ್ದಾರೆ. ಜನವರಿ 19ರಂದು ರಾಜೇಂದ್ರ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಬಣ್ಣದ ಗೆಜ್ಜೆ ಚಿತ್ರಕ್ಕೆ ರಾಜೇಂದ್ರ ಸಿಂಗ್ ಅವರು 1990ರಲ್ಲಿ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಸ್ವಾತಿ ಮುತ್ತಿನ ಮಳೆಯೇ ಸಾಂಗ್ ಸೂಪರ್ ಹಿಟ್ ಆಗಿತ್ತು. ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡುವ ಮುನ್ನವೇ ಈ ಟೈಟಲ್ ಅನ್ನು ತಾವು ರಿಜಿಸ್ಟರ್ ಮಾಡಿರುವುದಾಗಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.
ಅಂದ್ಹಾಗೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಸಿನಿಮಾದಲ್ಲಿ ಅಂಬರೀಶ್ ಮತ್ತು ಸುಹಾಸಿನಿ ನಟಿಸಿದ್ದಾರೆ. ಸಿನಿಮಾ ಈಗಾಗಲೇ 80% ರಷ್ಟು ಚಿತ್ರೀಕರಣವಾಗಿದೆ. ಅಂಬರೀಶ್ ನಿಧನದ ಬಳಿಕ ಕೆಲವು ದೃಶ್ಯಗಳು ಬಾಕಿ ಉಳಿದಿತ್ತು. ಈಗ ಈ ಶೀರ್ಷಿಕೆಯನ್ನು ಅಭಿಷೇಕ್ ಅಂಬರೀಶ್ ಸಿನಿಮಾಗೆ ಬಳಸಬೇಕು ಎಂದು ಆಲೋಚಿಸಿದ್ದಾರೆ. ಇನ್ನೂ ರಮ್ಯಾ ಕೂಡ ಇದೇ ಟೈಟಲ್ನಲ್ಲಿ ಚಿತ್ರ ನಿರ್ಮಾಣ ಮಾಡಿರುವುದು ಸಮಸ್ಯೆ ಎದುರಾಗಿದೆ.
ಈ ವಿಚಾರ ಕೋರ್ಟ್ನಲ್ಲಿ ತೀರ್ಪು ಬರುವವರೆಗೂ ರಮ್ಯಾ ನಿರ್ಮಾಣದ ಈ ಸಿನಿಮಾವನ್ನು ಸೆನ್ಸಾರ್ ಮಾಡಬಾರದು ಎಂದು ತಡೆ ನೀಡಿರುವುದಾಗಿ ಈ ವೇಳೆ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.
Ramya: Law prohibits the release of Swati Muttina male haniye movie…