Ramya: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್…
ಬಹುದಿನಗಳ ಬಳಿಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪ್ರತಿಭಾವಂತ ನಟ ರಾಜ್ ಬಿ ಶೆಟ್ಟಿ ರಮ್ಯಾ ಅವರಿಗೆ ಮತ್ತೊಮ್ಮೆ ಬಣ್ಣ ಹಚ್ಚಿಸುತ್ತಿದ್ದಾರೆ. ರಾಜ್ ಬಿ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.
ಮೋಹಕತಾರೆ ರಮ್ಯಾ ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಬಡ್ತಿ ಪಡೆಯುತ್ತಿದ್ದಾರೆ, ಅಭಿಮಾನಿಗಳ ಆಸೆಯಂತೆ ತಮ್ಮ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾಗಿ ಬರುತ್ತಿದ್ದಾರೆ. ಇದೀಗ ಸ್ವಾತಿ ಮುತ್ತಿನ ಮಳೆಹನಿಯೇ (Swathi Muttina Male Haniye) ಕುರಿತು ಹೊಸ ಅಪ್ಡೇಟ್ ಒಂದು ಹೊರ ಬಂದಿದೆ.
ಸಿಂಗಲ್ ಶೆಡ್ಯೂಲ್ನಲ್ಲಿ ಸಿನಿಮಾ ಕಂಪ್ಲೀಟ್
ದೀಪಾವಳಿ ಹಬ್ಬದ ನಂತರ `ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಶೂಟಿಂಗ್ ಶುರುವಾಗಲಿದೆ. ಊಟಿ ಮತ್ತು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಶೂಟಿಂಗ್ ಮಧ್ಯೆ ಎರಡು ದಿನವಷ್ಟೇ ಬ್ರೇಕ್ ಇರಲಿದ್ದು, ಒಂದೇ ಶೆಡ್ಯೂಲ್ನಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ.
ಗರುಡಗಮನ ವೃಷಭವಾಹನ ಚಿತ್ರ ನಂತರ ರಾಜ್ ಬಿ ಶೆಟ್ಟಿ ನಿರ್ದೇಶನದ್ದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು, ರಮ್ಯಾ ಅವರನ್ನ ತೆರೆಮೇಲೆ ಯಾವ ರೀತಿ ತೋರಿಸುತ್ತಾರೆ ಎನ್ನವ ಬಗ್ಗೆ ಕುತೂಹಲ ಗಳು ಹೆಚ್ಚಾಗಿವೆ.