Sandalwood – ಬೀದಿ ನಾಯಿ ಅಂತ್ಯಸಂಸ್ಕಾರದಲ್ಲಿ ರಮ್ಯಾ ಭಾಗಿ – ಕಣ್ಣೀರು.
ಬೀದಿ ನಾಯಿಯು ಮೇಲೆ ಉದ್ಯಮಿ ಆದಿಕೇಶವುಲು ಮೊಮ್ಮಗ ಕಾರು ಹತ್ತಿಸಿ ಲಾರ ಎಂಬ ಹೆಸರಿನ ನಾಯಿಯನ್ನ ಕೊಂದಿದ್ದ. ಘಟನೆಗೆ ಕನ್ನಡ ನಟಿಯರಾದ ರಮ್ಯಾ ಮತ್ತು ಐಂದ್ರಿತಾ ರೈ ಸೇರಿ ಹಲವು ಶ್ವಾನ ಪ್ರಿಯರು ಉದ್ಯಮಿ ಮೊಮ್ಮಗನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಲಾರಾ ಎಂಬ ಶ್ವಾನವನ್ನ ಸುಮ್ಮನಹಳ್ಳಿಯಲ್ಲಿರುವ ಪ್ರಾಣಿಗಳನ ಅಂತ್ಯಸಂಸ್ಕಾರ ಕಾರ್ಯಗಾರದಲ್ಲಿ ವಿಧಿಬದ್ದವಾಗಿ ನೆರವೇರಿಸಲಾಯಿತು. ಈ ಅಂತ್ಯಕ್ರಿಯಲ್ಲಿ ನಟಿ ರಮ್ಯಾ ಸೇರಿದಂತೆ ಹಲವು ಪ್ರಾಣಿಪ್ರಿಯರು ಭಾಗವಹಿಸಿದ್ದರು. ಶ್ವಾನದ ಅಂತ್ಯಸಂಸ್ಕಾರದಲ್ಲಿ ನಟಿ ಕಣ್ಣೀರು ಹಾಕಿದ್ದಾರೆ.
ಬೀದಿ ನಾಯಿ ಲಾರಾ ಪಾರ್ಥಿವ ಶರೀರವನ್ನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿಗೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಲ್ಲಿಂದ ಅಂಬುಲೆನ್ಸ್ ಮೂಲಕ ಪ್ರಾಣಿಗಳ ಚಿತಾಗಾರಕ್ಕೆ ತೆಗೆದುಕೊಂಡು ಬಂದು ಅಂತ್ಯ ಸಂಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ನಾಯಿಯನನ್ ಪೋಷಣೆ ಮಾಡುತ್ತಿದ್ದ ಗಾಯತ್ರಿ ಎಂಬುವವರು ಮತ್ತು ಬಾಲಕನನ್ನ ಸಮಾಧಾನ ಪಡಿಸಿದರು. ಬಿತ್ತಿ ಪ್ರತ್ರವನ್ನ ಹಿಡಿದು ನಾಯಿಗಳ ಮೇಲಿನ ಕ್ರೌರ್ಯ ತಡೆಯಬೇಕು ಎಂದು ಬಿತ್ತಿ ಪತ್ರ ಪ್ರದರ್ಶಿಸಿದರು.
ಜನವರಿ 29 ರಂದು ಜಯನಗರದ 29 ನೆ ಬ್ಲಾಕ್ ನಲ್ಲಿ ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಉದ್ದೇಶ ಪೂರ್ವಕವಾಗಿ ಆಡಿ ಕಾರು ಹರಿದಿತ್ತು. ವೀಡಿಯೋದಲ್ಲಿ ಇದು ಸ್ಪಷ್ಟವಾಗಿ ಕಾಣಿಸಿತ್ತು.
ಲಾರಾ ನಾಯಿ ಹತ್ಯೆಯ ಬಗ್ಗೆ ನನಗೆ ಟ್ವಿಟ್ಟರ್ನಲ್ಲಿ ಮಾಹಿತಿ ತಿಳಿಯಿತು. ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಆರೋಪಿ ಉದ್ದೇಶಪೂರ್ವಕವಾಗಿಯೇ ನಾಯಿಯನ್ನು ಕೊಂದಿದ್ದಾನೆ. ಈ ಭೂಮಿ ಮೇಲೆ ಬದುಕಲು ನಮಗೆ ಇರುವಷ್ಟೇ ಹಕ್ಕು ಬೇರೆ ಪ್ರಾಣಿ-ಪಕ್ಷಿಗಳಿಗೂ ಇದೆ ಪ್ರಾಣಿ ರಕ್ಷಣೆ ಕಾನೂನನ್ನು ಕಠಿಣಗೊಳಿಸಬೇಕು ಅಂತ ನಾನು ಸರ್ಕಾರಕ್ಕೆ ಮನವಿ ಮಾಡುತ್ತೀನಿ’’ ಎಂದು ರಮ್ಯಾ ಮಾದ್ಯಮಗಳೊಂದಿಗೆ ಮಾತನಾಡಿದದರು.








