ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ದಶಕಗಳ ಕಾಲ ಸಿನಿಮಾರಂಗದಲ್ಲಿ ಮೆರೆದು ನಂತರ ಕೆಲ ವರ್ಷಗಳಿಂದ ಸಿನಿಮಾರಂಗ ಜೊತೆಗೆ ರಾಜಕೀಯದಿಂದಲೂ ದೂರ ಉಳಿದಿದ್ದಾರೆ.. ಆದ್ರೆ ಎವರ್ ಗ್ರೀನ್ ನಟಿ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಈಗಲೂ ಫ್ಯಾನ್ ಫಾಲೋವರ್ ಗಳೇನು ಕಡಿಮೆಯಿಲ್ಲ.. ಈಗಲೂ ಅವರು ಸಿನಿಮಾ ರಂಗಕ್ಕೆ ಮರಳಬೇಕೆಂದು ಅಭಿಮಾನಿಗಳು ಕಾಯ್ತಿದ್ದಾರೆ.. ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವ ಮನಸ್ಸು ಮಾಡಿದ್ದಾರೆ ರಮ್ಯಾ ಎನ್ನಲಾಗ್ತಿದೆ…
ಅಷ್ಟೇ ಅಲ್ಲ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿರುವ ಕಬರ್ ಅಂದ್ರೆ ರಕ್ಷಿತ್ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುತ್ತಿದ್ದಾರೆ ಎನ್ನುವುದು.
ರಕ್ಷಿತ್ ಶೆಟ್ಟಿ ಅವರು ಹೊಂಬಾಳೆ ಬ್ಯಾನರ್ ನಲ್ಲಿ ಮಾಡುವ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎನ್ನಲಾಗ್ತಿದೆ.. ಆದರೆ ಇನ್ನೂ ಅಧಿಕೃತವಾಗಿ ಸುದ್ದಿ ಹೊರಬಿದ್ದಿಲ್ಲ..