ಕಿಡಿಗೇಡಿಗೆ ಬುದ್ಧಿ ಕಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯ….
ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ದಶಕಗಳ ಕಾಲ ಸಿನಿಮಾರಂಗದಲ್ಲಿ ಮೆರೆದು ನಂತರ ಕೆಲ ವರ್ಷಗಳಿಂದ ಸಿನಿಮಾರಂಗ ಜೊತೆಗೆ ರಾಜಕೀಯದಿಂದಲೂ ದೂರ ಉಳಿದಿದ್ದಾರೆ.. ಆದ್ರೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಈಗಲೂ ಫ್ಯಾನ್ ಫಾಲೋವರ್ ಗಳೇನು ಕಡಿಮೆಯಿಲ್ಲ..
ರಮ್ಯಾ ಸಿನಿಮಾ ನಟನೆಯಿಂದ ಉಳಿದರೂ ಇತರರ ಸಿನಿಮಾ ಕುರಿತು ತಮ್ಮ ಅಭಿಪ್ರಾಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚೆಗೆ ರಮ್ಯಾ ಇನ್ಸ್ಟಾಗ್ರಾಂ ನಲ್ಲಿ ಅಶ್ಲೀಲ ನಿಂದನೆಯನ್ನ ಎದುರಿಸಿದ್ದಾರೆ. ಆತನಿಗೆ ಬದ್ಧಿ ಕಲಿಸಲು ರಮ್ಯ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ.
ಕಿಡಿಗೇಡಿಯೊಬ್ಬ ಇನ್ಸ್ಟಾದಲ್ಲಿ ರಮ್ಯಾ ಅವರಿಗೆ ನಿಂದನೆ ಮಾಡಿದ್ದಾನೆ ಎಂದು ರಮ್ಯಾ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಇರುವ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ತಮಗೆ ಇನ್ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬ ನಿಂದನೆ ಮಾಡಿದ್ದು, ಅವನ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳುವಂತೆ ರಮ್ಯಾ ಮನವಿ ಮಾಡಿದ್ದಾರೆ.