Ranaji Final : ಸೌರಾಷ್ಟ್ರ ವೇಗಕ್ಕೆ ನಲುಗಿದ ಆತಿಥೇಯ ಬಂಗಾಳ
ವೇಗಿಗಾಳದ ಜಯದೇವ್ ಉನಾದ್ಕತ್ ಮತ್ತು ಚೇತನ್ ಸಾಕಾರಿಯಾ ದಾಳಿಯ ನೆರವಿನಿಂದ ಸೌರಾಷ್ಟ್ರ ಮೊದಲ ದಿನ ಆತಿಥೇಯ ಬಂಗಾಳ ವಿರುದ್ಧ ಮೇಲುಗೈ ಸಾಧಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆರಂಭವಾದ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ಬಂಗಾಳ ಮೊದಲ ಇನ್ನಿಂಗ್ಸ್ ನಲ್ಲಿ 174 ರನ್ಗಳಿಗೆ ಆಲೌಟ್ ಆಯಿತು. ಸೌರಾಷ್ಟ್ರ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ.
ಟಾಸ್ ಸೋತ ಸೌರಾಷ್ಟ್ರ ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕ ಉನಾದ್ಕತ್ ಮತ್ತು ಚೇತನ್ ದಾಳಿಗೆ ಸೌರಾಷ್ಟ್ರ ತತ್ತರಿಸಿ ಹೋಯಿತು. ಬಂಗಳಾ ಪರ ಸುಮಂತ್ ಗುಪ್ತಾ 1, ಸುದೀಪ್ ಕುಮಾರ್ 0, ಆಕಾಶ್ ಗಾಟಕ್ 17 ಚೇತನ್ ಸಾಕಾರಿಯಾಗೆ ವಿಕೆಟ್ ಒಪ್ಪಿಸಿದರು. ಅಭಿಮನ್ಯೂ ಈಶ್ವರನ್ 0, ನಾಯಕ ಮನೋಜ್ ತಿವಾರಿ 7, ಮುಕೇಶ್ ಕುಮಾರ್ 1 ರನ್ ಗಳಿಸಿ ವೇಗಿ ಉನಾದ್ಕತ್ಗೆ ವಿಕೆಟ್ ಒಪ್ಪಿಸಿದರು.
ಅನುಸ್ತುಪ್ ಮಜುಂಧಾರ್ 16, ಅಭಿಷೇಕ್ ಪೊರೆಲ್ 50 ರನ್ ಗಳಿಸಿ ಚಿರಾಗ್ ಜಾನಿಗೆ ಬಲಿಯಾದರು. ಸೌರಾಷ್ಟ್ರ ಪರ ಉನಾದ್ಕತ್ ಮತ್ತು ಚೇತನ್ ತಲಾ 3 ವಿಕೆಟ್ ಪಡೆದರೆ ಚಿರಾಗ್ ಜಾನಿ ಹಾಗೂ ಧಮೇಂದ್ರ ಸಿನ್ಹ್ ಜಡೇಜಾ ತಲಾ 2 ವಿಕೆಟ್ ಪಡೆದರು.
ದಿನದಾಟದ ಅಂತ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ಆರಂಭದಲ್ಲೆ ಜಯ್ ಗೋಹಿಲ್ 6, ವಿಶ್ವರಾಜ್ ಜಡೇಜಾ 25 ರನ್ ಗಳಿಸಿ ಪೆವಲಿಯನ್ ಸೇರಿದರು. ಹಾರ್ವಿಕ್ ದೇಸಾಯಿ 38, ಚೇತನ್ ಸಾಕಾರಿಯಾ ಅಜೇಯ 2 ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Ranaji Final : west bengal , sourashtra match update








