Ranaji : ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ 10 ವಿಕೆಟ್ ಜಯ..!!
ಭರವಸೆಯ ಬೌಲರ್ಗಳಾದ ವಿಜಯ್ ಕುಮಾರ್ ವೈಶಾಕ್ ಹಾಗೂ ಸ್ಪಿನ್ ಬೌಲರ್ ಕೃಷ್ಣಪ್ಪ ಗೌತಮ್ ಅವರ ಬಿಗುವಿನ ದಾಳಿಯ ನೆರವಿನಿಂದ ಕರ್ನಾಟಕ (Karnataka) ರಣಜಿ (Ranji) ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ, ರಾಜಸ್ಥಾನ (Rajasthan) ತಂಡವನ್ನು ಮಣಿಸಿದೆ.
ಈ ಮೂಲಕ ಕರ್ನಾಟಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಗುರುವಾರ 8 ವಿಕೆಟ್ಗೆ 380 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿದ ಕರ್ನಾಟಕ 445 ರನ್ ಗಳಿಗೆ ಆಲೌಟ್ ಆಯಿತು.
ಎರಡನೇ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ 330 ರನ್ ಗಳಿಗೆ ಸರ್ವ ಪತನ ಕಂಡಿತು. ಅಲ್ಪ ಮೊತ್ತವನ್ನು ಕರ್ನಾಟಕ ವಿಕೆಟ್ ನಷ್ಟವಿಲ್ಲದೆ ಮುಟ್ಟಿ ಬೀಗುತು.
ಸಿ ಗುಂಪಿನಲ್ಲಿ ಕರ್ನಾಟಕ ಆಡಿದ 5 ಪಂದ್ಯಗಳಲ್ಲಿ 3 ಜಯ 2 ಡ್ರಾ ಸಾಧಿಸಿದ್ದು, 26 ಅಂಕಗಳನ್ನು ಕಲೆ ಹಾಕಿದೆ.
ಗುರುವಾರ ಕರ್ನಾಟಕದ ಪರ ಮನೀಷ್ ಪಾಂಡೆ ಶತಕ ಬಾರಿಸಿ ಮಿಂಚಿದರು.
ಇವರ ಮನಮೋಹಕ ಇನಿಂಗ್ಸ್ ನಲ್ಲಿ 10 ಬೌಂಡರಿ, 4 ಸಿಕ್ಸರ್ ಗಳು ಸೇರಿವೆ. ಉಳಿದಂತೆ ಶ್ರೀನಿವಾಸ್ ಶರತ್ 42 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ರಾಜಸ್ಥಾನ ಪರ ಎರಡನೇ ಇನಿಂಗ್ಸ್ ನಲ್ಲಿ ಮಹಿಪಾಲ್ ಲೋಮ್ರೋರ್ ಒಂದು ರನ್ ನಿಂದ ಶತಕ ವಂಚಿತರಾದರು. ಇವರ ಇನಿಂಗ್ಸ್ನಲ್ಲಿ 11 ಬೌಂಡರಿ, 6 ಸಿಕ್ಸರ್ ಸೇರಿವೆ.
ಉಳಿದಂತೆ ಆದಿತ್ಯ ಗರ್ವಾಲ್ 66, ಸಮರ್ಪಿತ್ ಜೋಶಿ 63 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಕರ್ನಾಟಕದ ಪರ ವೇಗದ ಬೌಲರ್ ವಿಜಯ್ ಕುಮಾರ್ 73 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಕೆ.ಗೌತಮ್ 3, ವಾಸುಕಿ ಕೌಶಿಕ್ 2 ವಿಕೆಟ್ ಉರುಳಿಸಿದರು.
Ranaji , Karnatka won against Rajasthan