Ranaji Trophy : ಕರ್ನಾಟಕ, ರಾಜಸ್ತಾನ ನಡುವೆ ಫೈಟ್
ಇಂದಿನಿಂದ ಕರ್ನಾಟಕ ತಂಡ ತವರಿನಲ್ಲಿ ಬಲಿಷ್ಠ ರಾಜಸ್ತಾನ ತಂಡವನ್ನು ಎದುರಿಸಲಿದೆ.
ಮಂಗಳವಾರ ಆಲೂರಿನಲ್ಲಿ ನಡೆಯಲಿರುವ ರಣಜಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ತಾನ ತಂಡವನ್ನು ಎದುರಿಸಲಿದೆ.
ಟೂರ್ನಿಯಲ್ಲಿ ಎರಡೂ ತಂಡಗಳು ಸೋತಿಲ್ಲ . ಕರ್ನಾಟಕ ಆಡಿದ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು 19 ಅಂಕಗಳೊಂದಿಗೆ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿದೆ. ರಾಜಸ್ತಾನ 4 ಪಂದ್ಯಗಳಿಂದ 1ರಲ್ಲಿ ಗೆದ್ದು 3 ಪಂದ್ಯಗಳನ್ನು ಡ್ರಾ ಮಾಡಿಕೊಂಡು 13 ಅಂಕ ಪಡೆದು ಎರಡನೆ ಸ್ಥಾನದಲ್ಲಿದೆ.
2019ರ ನಂತರ ಇದೆ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹಿಂದಿನ 3 ಮುಖಾಮುಖಿಯಲ್ಲಿ ರಾಜ್ಯ ತಂಡ ರಾಜಸ್ತಾನ ವಿರುದ್ಧ ಗೆದ್ದಿತ್ತು.
ಮೊನ್ನೆ ಛತ್ತೀಸ್ಗಢ ವಿರುದ್ಧ 7 ವಿಕೆಟ್ಗಳಿಂದ ಗೆದ್ದಿತ್ತು. ಗೋವಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತು. ತವರಿನಲ್ಲಿ ಪುದುಚೇರಿ ವಿರುದ್ಧ ಇನ್ನಿಂಗ್ಸ್ ಮತ್ತು 7 ರನ್ಗಳಿಂದ ಗೆದ್ದುಕೊಂಡಿತ್ತು. ಸರ್ವಿಸ್ ವಿರುದ್ಧ ಡ್ರಾ ಮಾಡಿಕೊಂಡಿತ್ತು.
ಇನ್ನು ಕಳೆದ ಪಂದ್ಯದಲ್ಲಿ ರಾಜಸ್ತಾನ ತಂಡ ಜಾರ್ಖಂಡ್ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಪುದುಚೇರಿ ವಿರುದ್ಧ ಇನ್ನಿಂಗ್ಸ ಹಾಗೂ 101 ರನ್ ಗೆಲುವು ದಾಖಲಿಸಿತ್ತು. ಕೇರಳ ವಿರುದ್ಧ ಡ್ರಾ ಮಾಡಿಕೊಂಡಿತ್ತುಘಿ. ಗೋವಾ ವಿರುದ್ಧ ಡ್ರಾ ಮಾಡಿಕೊಂಡಿತ್ತು.
Ranaji Trophy – Fight between Karnataka – rajasthan team