Brahmastra: ಬಾಳೆ ಎಲೆಯಲ್ಲಿ ನಾಗಾರ್ಜುನ, ರಣಬೀರ್ , ರಾಜಮೌಳಿ ಊಟ – ರಣಬೀರ್ ಗೆ ಟೀಕೆ…
‘ಬ್ರಹ್ಮಾಸ್ತ್ರ’ ಚಿತ್ರತಂಡ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಈ ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸುತ್ತಿದ್ದು, ತೆಲುಗು ನಟ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವು ಸೆಪ್ಟೆಂಬರ್ 9 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರೊಂದಿಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ಈ ಸಿನಿಮಾವನ್ನು ದಕ್ಷಿಣ ಭಾರತದಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.
ಈ ಚಿತ್ರದ ಪ್ರಚಾರಕ್ಕಾಗಿ ನಾಗಾರ್ಜುನ, ರಣಬೀರ್ ಕಪೂರ್ ಮತ್ತು ರಾಜಮೌಳಿ ದಕ್ಷಿಣದ ರಾಜ್ಯಗಳ ವಿವಿಧ ನಗರಗಳಲ್ಲಿ ಬಿರುಸಿನ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಚೆನೈನಲ್ಲಿ ಪ್ರಚಾರ ಕಾರ್ಯಕ್ರಮದ ನಂತರ ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಚಿತ್ರತಂಡ ಉತ್ತರಿಸಿದೆ. ನಂತರ ಈ ಮೂವರು ತಾರೆಯರು ಚೆನ್ನೈನ ರೆಸ್ಟೋರೆಂಟ್ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ದಕ್ಷಿಣ ಭಾರತೀಯ ಶೈಲಿಯ ಬಾಳೆ ಎಲೆ ಊಟ ನಟರು ಸೇವಿಸಿದ್ದಾರೆ. ಇದಕ್ಕೆ ಸಂಬಂದಿಸಿದ ವಿಡಿಯೋ ಸೋಶಿಯಲ್ ಮಿಡಿಯಾ ದಲ್ಲಿ ವೈರಲ್ ಆಗಿದೆ.
https://www.instagram.com/reel/Chou3kFIeWA/?utm_source=ig_embed&ig_rid=89f56e89-dc5a-439c-a80d-75e8f1a13510
ಬಾಳೆ ಎಲೆಯಲ್ಲಿ ನಾಗಾರ್ಜುನ ಮತ್ತು ರಾಜಮೌಳಿ ನ್ಯಾಚುರಲ್ ಆಗಿ ಊಟ ಮಾಡುತ್ತಿರುವಾಗ ರಣಬೀರ್ ಕೊಂಚ ಮುಜುಗರಕ್ಕೀಡಾಗಿರುವುದು ಕಂಡುಬಂದಿದೆ. ಪ್ರಚಾರಕ್ಕಾಗಿ ಮಾತ್ರ ರಣಬೀರ್ ಊಟ ಮಾಡುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.