rangitaranga
ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿ ನಿರೂಪ್ ಭಂಡಾರಿ ನಟಿಸಿದ್ದ ಬ್ಲಾಕ್ ಬಾಸ್ಟರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ರಂಗೀತರಂಗ ಿದೀಗ ಬಿಡುಗಡೆ ಆಗಿ 5 ವರರ್ಷಗಳೇ ಕಳೆದಿದೆ. ಈ ಸಿನಿಮಾ ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದೆ. ಹೌದು ಸುಮಾರು 5 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ರಂಗಿತರಂಗ ಸಿನಿಮಾವನ್ನು ಇನ್ನೂ ನೋಡದವರು ಚಿತ್ರಮಂದಿರಗಳಲ್ಲಿ ನೋಡಿ ಎಂಜಾಯ್ ಮಾಡುವ ಅವಕಾಶ ಮತ್ತೆ ಬಂದಿದೆ. ಅದ್ರಲ್ಲೂ ರಂಗೀತರಂಗ ಚಿತ್ರ ಥಿಯೇಟರ್ ನಲ್ಲಿ ನೊಡೋ ಅನುಭವವೇ ಬೇರೆ. ಸೌಂಡ್ ಎಫೆಕ್ಟ್ಸ್ ಲೊಕೇಶನ್ ಎಲ್ಲವೂ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳೋದು ರೋಮಾಂಚನಕಾರಿ.
ಲಾಕ್ ಡೌನ್ ಬಳಿಕ ಚಿತ್ರಮಂದಿಗಳು ಓಪನ್ ಆಗಿ ಕೆಲವೇ ದಿನಗಳಾಗಿದೆ. ಆದ್ರೆ ಹೊಸ ಸಿನಿಮಾಗಳ ಬಿಡುಗಡೆದೆಗೆ ಮೇಕರ್ಸ್ ಹಿಂದೇಟು ಹಾಕ್ತಾಯಿದ್ದಾರೆ. ಇದರ ನಡುವೆಯೇ ಈಗಾಗಲೇ ರಿಲೀಸ್ ಆಗಿ ಹಿಟ್ ಆಗಿರುವ ಸಿನಿಮಾಗಳ ರೀ ರೀಲೀಸ್ ಪರ್ವ ಸ್ಯಾಂಡಲ್ ವುಡ್ ನಲ್ಲಿ ಆರಂಭ್ವಾಗಿದೆ. ಈ ಸಾಲಿ ಕಿಚ್ಚ ಸುದೀಪ್ ಅವರ ಕೊಟಿಗೊಬ್ಬ 2, ಯಶ್ ಅವರ ಕೆ ಜಿಎಫ್, ಶಿವರಾಜ್ ಕುಮಾರ್ ಅವರ ಟಗರು, ದರ್ಶನ್ ಅವರ ಕುರುಕ್ಷೇತ್ರ ಹೀಗೆ ಸಾಲು ಸಾಲು ಸಿನಿಮಾಗಳು ರೀ ರಿಲೀಸ್ ಆಗಿವೆ.
ರಂಗಿತರಂಗ ಸಿನಿಮಾ 2015 ಜುಲೈ 3ರಲ್ಲಿ ತೆರೆಗೆ ಬಂದಿತ್ತು. ಹೊಸಬರಾಗಿದ್ದ ಭಂಡಾರಿ ಬ್ರದರ್ಸ್ ಮೊದಲ ಸಿನಿಮಾವನ್ನ ಕನ್ನಡ ಸಿನಿಮಾಪ್ರಿಯರು ಮನಸಾರೆ ಒಪ್ಪಿದ್ದರು. ಈ ಚಿತ್ರದ ವಿಭಿನ್ನ ಕಥೆ, ಲೊಕೇಶನ್, ಸಂಗೀತ ಅಭಿಮಾನಿಗಳ ಮನಗೆದ್ದಿತ್ತು. ಈ ಚಿತ್ರ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ದೇಶ ಹಾಗೂ ವಿದೇಶದಲ್ಲೂ ಸಿಕ್ಕಾಪಪಟ್ಟೆ ಸದ್ದು ಮಾಡಿತ್ತು. ಚಿತ್ರದಲ್ಲಿ ನಿರೂಪ್ ಭಂಡಾರಿಗೆ ನಾಯಕಿಯರಾಗಿ ರಾಧಿಕಾ ನಾರಾಯಣ್, ಅವಂತಿಕಾ ಶೆಟ್ಟಿ ಮಿಂಚಿದ್ದರು. ಅಲ್ಲದೇ ಸಾಯಿ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.
rangitaranga
ಈ ಸಲ ಕಂಗನಾ ಸುದ್ದಿಯಲ್ಲಿರೋದೇ ಬೇರೆಯ ವಿಚಾರಕ್ಕೆ : ಈ ನಟಿ ಹೊಗಳಿದ್ದು ಯಾರನ್ನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel