ರಣಜಿಯಲ್ಲಿ ರನ್ ಸುನಾಮಿ ಎಬ್ಬಿಸುತ್ತಿದ್ದಾನೆ Kohli.. Virat ಅಲ್ಲ
ರಣಜಿ ಟ್ರೋಫಿಯಲ್ಲಿ ಮಿಜೋರಾಂ ನಾಯಕ ತರುವಾರ್ ಕೊಹ್ಲಿ ಹವಾ ನಡೆಯುತ್ತಿದೆ.
ತರುವಾರ್ ಕೊಹ್ಲಿ, ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಮಾಜಿ ಸಹ ಆಟಗಾರ.
ತರುವಾರ್ ಕೊಹ್ಲಿ 2022 ರ ರಣಜಿ ಟ್ರೋಫಿಯಲ್ಲಿ ರನ್‌ಗಳ ಪ್ರವಾಹ ಎಬ್ಬಿಸುತ್ತಿದ್ದಾರೆ.
ಈ ಋತುವಿನಲ್ಲಿ ಇದುವರೆಗೆ 6 ಇನ್ನಿಂಗ್ಸ್‌ಗಳಲ್ಲಿ 526 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕ ಮತ್ತು ಮೂರು ಶತಕಗಳು ಸೇರಿವೆ.
ಬಿಹಾರ ವಿರುದ್ಧದ ಮೊದಲ ಪಂದ್ಯದಲ್ಲಿ ಎರಡು ಇನಿಂಗ್ಸ್ ಗಳಲ್ಲಿ ಶತಕ (151, 101 ಎಸೆತ, ವಿಕೆಟ್) ಸಿಡಿಸಿದ ಕೊಹ್ಲಿ, ಮಣಿಪುರ ವಿರುದ್ಧದ ಎರಡನೇ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್, 22 ರನ್, ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ಅರ್ಧಶತಕ (69 ರನ್) ಗಳಿಸಿದರು.
ನಾಗಾಲ್ಯಾಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಕೊಹ್ಲಿ ಮತ್ತೊಮ್ಮೆ ಅಬ್ಬರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 32 ರನ್, 2 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದು ಶತಕ (ಔಟಾಗದೆ 151) ಗಳಿಸಿದರು.
ಇನ್ನು ತರುವಾರ್ ಕೊಹ್ಲಿ, ಪ್ರಥಮ ದರ್ಜೆಯಲ್ಲಿ ಇದುವರೆಗೆ 49 ಪಂದ್ಯಗಳನ್ನು ಆಡಿದ್ದು, 51.02 ಸರಾಸರಿಯಲ್ಲಿ 3827 ರನ್ ಗಳಿಸಿದ್ದಾರೆ.
ranji-trophy-2022-taruwar-kohli









