Ranaji Trophy : ಮೊದಲ ತ್ರಿಶತಕ ಸಿಡಿಸಿದ ಪೃಥ್ವಿ ಶಾ..!!
ಪೃಥ್ವಿ ಶಾ ದೇಶೀಯ ಕ್ರಿಕೆಟ್ ರಣಜಿ ಟ್ರೋಫಿಯಲ್ಲಿ ಮೊದಲ ತ್ರಿಶತಕ ಸಿಡಿಸಿದ್ದಾರೆ. ರಣಜಿ ಟ್ರೋಫಿಯ ಐದನೇ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡ ಅಸ್ಸಾಂ ತಂಡವನ್ನು ಎದುರಿಸುತ್ತಿದ್ದು, ಎರಡನೇ ದಿನದ ಮೊದಲ ಸೆಷನ್ ನಲ್ಲಿ ಶಾ ತ್ರಿಶತಕ ಪೂರೈಸಿದರು. ಈ ಮೂಲಕ ರಾಷ್ಟ್ರೀಯ ಆಯ್ಕೆ ಸಮಿತಿಯ ಕದವನ್ನು ಬಡೆಯುತ್ತಿದ್ದಾರೆ. ಅಲ್ಲದೆ ಟೀಕೆಗಳಿಗೆ ರನ್ ಗಳಿಂದ ಉತ್ತರ ನೀಡುತ್ತಿದ್ದಾರೆ.
ಪೃಥ್ವಿ ಶಾ 326 ಎಸೆತಗಳನ್ನು ಎದುರಿಸಿದರು. ಇದು ದೇಶೀಯ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಅವರ ಗರಿಷ್ಠ ಸ್ಕೋರ್ 202 ರನ್ ಆಗಿತ್ತು. ಈಗ ಪೃಥ್ವಿ ಅದಕ್ಕಿಂತ ಮುಂದೆ ಸಾಗಿದ್ದಾರೆ. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 43 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ರಣಜಿಯ ಎರಡನೇ ಅತ್ಯುತ್ತಮ ಸ್ಕೋರ್
ಪೃಥ್ವಿ 379 ರನ್‌ಗಳ ಇನಿಂಗ್ಸ್ ಕಟ್ಟಿದರು. ಇದು ರಣಜಿಯಲ್ಲಿ ಎರಡನೇ ಅತ್ಯುತ್ತಮ ಸ್ಕೋರ್ ಆಗಿದೆ. ಒಬ್ಬ ಆಟಗಾರ ಮಾತ್ರ ಅವರಿಗಿಂತ ಹೆಚ್ಚು ಗಳಿಸಿದ್ದಾರೆ. ಮಹಾರಾಷ್ಟ್ರದ ಬೀಬಿ ನಿಂಬಾಳ್ಕರ್ ಅವರು 1948-49 ರ ರಣಜಿ ಋತುವಿನಲ್ಲಿ ಸೌರಾಷ್ಟ್ರ ವಿರುದ್ಧ ಅಜೇಯ 443 ರನ್ ಗಳಿಸಿದ್ದು ದಾಖಲೆಯಾಗಿದೆ. ಈ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್ ಮೂರನೇ ಸ್ಥಾನದಲ್ಲಿದ್ದಾರೆ. 1990-91ರಲ್ಲಿ ಹೈದರಾಬಾದ್ ವಿರುದ್ಧ 377 ರನ್ ಗಳಿಸಿದ್ದಾಗ ಮಂಜ್ರೇಕರ್ ಮುಂಬೈ ಪರ ಆಡಿದ್ದರು.
ಮುಂಬೈ ಬಲಿಷ್ಠ ಸ್ಥಾನದಲ್ಲಿದೆ
ಮತ್ತೊಂದೆಡೆ ಶಾ ಅವರ ಈ ಇನ್ನಿಂಗ್ಸ್ ಆಧಾರದಲ್ಲಿ ಮುಂಬೈ ತಂಡ ಎರಡನೇ ದಿನ ಅಸ್ಸಾಂ ವಿರುದ್ಧ ದೊಡ್ಡ ಮೊತ್ತದತ್ತ ಸಾಗುತ್ತಿದೆ. ಮುಂಬೈ 3 ವಿಕೆಟ್ ನಷ್ಟದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದೆ.
Ranji Trophy: Prithvi Shah hits a triple century