Ranu mondal
ರೈಲ್ವೇ ಸ್ಟೇಷನ್ ನಲ್ಲಿ ಹಾಡು ಹಾಡುತ್ತಾ ಒಮ್ಮೆಲೆ ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ( Ranu mondal ) ಸಂಚಲ ಸೃಷ್ಟಿ ಮಾಡಿದ್ರು.
ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲಿ ನೋಡ್ರು ರಾನು ದೇ ಸುದ್ದಿ. ಅಷ್ಟರ ಮಟ್ಟಿಗೆ ರಾನು ಟ್ರೆಂಡ್ ಆಗಿಬಿಟ್ಟಿದ್ದರು. ರಾನು ಧ್ವನಿಗೆ ಸಾರ್ವಜನಿಕರು ಫಿದಾ ಆಗಿದ್ದರು.
ಇನ್ನೂ ರಾನು ಅವರನ್ನ ಗುರುತಿಸಿದ್ದ ಹಿಮೇಶ್ ಅವರ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರಕ್ಕಾಗಿ ರಾನು ಮೊಂಡಲ್ ಹಾಡಿದ್ದ ತೇರಿ ಮೇರಿ ಕಹಾನಿ ಸಾಂಗ್ ಅಂತೂ ಸೆನ್ಷೇಷನ್ ಸೃಷ್ಟಿ ಮಾಡಿತ್ತು.
ಈ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿ ರಾನು ಅವರ ಜೀವನವನ್ನೇ ಬದಲಾಯಿಸಿಬಿಟ್ಟಿತ್ತು.
ಇದಾದ ಬಳಿಕ ರಾಜು ಮೊಂಡಲ್ ಅವರಿಗೆ ಬೇಡಿಕೆ ಹೆಚ್ಚಾಯ್ತು. ರೈಲ್ವೇ ಸ್ಟೇಷನ್ ನಿಂದ ರಾನು ದೊಡ್ಡ ಮನೆಗೆ ಶಿಫ್ಟ್ ಆಗಿದ್ರು.
ಆದರೆ ಹೀಗೆ ರಾತ್ರೋರಾತ್ರಿ ಫೇಮಸ್ ಅಗಿ ನೇಮ್ ಫೇಮ್ ಗಳಿಸಿದ ರಾನು ಈಗ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರಂತೆ.
ಹೌದು ಸಂಗೀತ ಕಾರ್ಯಕ್ರಮ, ಬಾಲಿವುಡ್ ನ ದೊಡ್ಡ ದೊಡ್ಡ ಈವೆಂಟ್, ರ್ಯಾಂಪ್ ವಾಕ್ ಗಳಲ್ಲಿ ರಾನು ಕಾಣಿಸಿಕೊಂಡಿದ್ದರು.
ಹಲವು ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ರಾನು ಮೊಂಡಲ್ ಸಿಕ್ಕಾಪಟ್ಟೆ ಹಣ ಮಾಡಿದ್ದಾರೆ.
ಅವರಿಗೆ ಬಂಗಲೆಯನ್ನು ಸಹ ಗಿಫ್ಟ್ ಆಗಿ ನೀಡಲಾಗಿದೆ ಎಂದೆಲ್ಲಾ ಹೇಳಲಾಗ್ತಿತ್ತು. ಆದರೀಗ ರಾನು ಮತ್ತೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
ಕೊರೊನಾ ಲಾಕ್ ಡೌನ್ ಬಳಿಕ ರಾನು ಮೊಂಡಲ್ ಆರ್ಥಿಕವಾಗಿ ಪರದಾಡುತ್ತಿದ್ದಾರಂತೆ.
ಅವಕಾಶಗಳಿಲ್ಲದೆ ಮನೆಯಲ್ಲೇ ಇದ್ದಾರಂತೆ.
ರಾನು ಮೊಂಡಲ್ ಜನಪ್ರಿಯತೆಯೂ ಕಡಿಮೆಯಾಗಿದೆ.
ಇನ್ನೂ ಲಾಕ್ ಡೌನ್ ಸಮಯದಲ್ಲಿ ಕೆಲವರು ಮೂಲಭೂತ ಅವಶ್ಯಕ ವಸ್ತುಗಳನ್ನು ನೀಡಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ.
ಇನ್ನೂ ಅವರ ಹಿಂದಿನ ಸ್ಥಿತಿಗೆ ಮರಳುವುದಕ್ಕೆ ಕಾರಣ ಅವರ ವಿವಾದಗಳೇ ಎಂದೇ ವರ್ಣಿಸಲಾಗ್ತಿದೆ.
ಹೌದು ರಾನು ಎಷ್ಟು ಬೇಗ ಫೇಮಸ್ ಆದ್ರೋ ಅಷ್ಟೇ ಸ್ಪೀಡ್ ಅಲ್ಲಿ ಟ್ರೋಲ್ ಗೂ ಒಳಗಾದ್ರು.
ಸ್ಟಾರ್ ಆದ ಬಳಿಕ ರಾನು ಮೊಂಡಲ್ ವರಸೆಯೇ ಬದಲಾಗಿಹೋಗಿತ್ತು. ಇನ್ನೂ ಸೆಲ್ಫಿ ಕೇಳಲು ಬಂದ ಅಭಿಮಾನಿ ಜೊತೆ ರಾನು ನಡೆದುಕೊಂಡ ರೀತಿಗೆ ನೆಟ್ಟಿಗರು ರಾನು ವಿರುದ್ಧ ಕೆಂಡ ಕಾರಿದ್ರು.
ಬಳಿಕ ರ್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ರಾನು ಮೊಂಡಲ್ ಅತಿಯಾದ ಮೇಕಪ್ ನಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ರು.
ಇದೀಗ ಮತ್ತೆ ರಾನು ಮತ್ತೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಸಹಾಯದ ಅವಶ್ಯಕತೆಯಿದೆ ಎಂಬ ವದಂತಿಗಳು ಹರಿದಾಡುತ್ತಿವೆ.









