ಬೆತ್ತಲೆ ವೀರ – ಸಂಪೂರ್ಣ ನಗ್ನವಾಗಿ ಪೋಸ್ ನೀಡಿದ ನಟ ರಣ್ವೀರ್ ಸಿಂಗ್
ಬಾಲಿವುಡ್ ನಲ್ಲಿ ವಿಚಿತ್ರವಾಗಿ ಬಟ್ಟೆ ಧರಿಸಿ ಸುದ್ದಿಮಾಡುವ ರಣ್ವೀರ್ ಸಿಂಗ್ ಈ ಭಾರಿ ಬಟ್ಟೆ ಧರಿಸದಯೇ ಸುದ್ದಿ ಮಾಡಿದ್ದಾರೆ. ಖಾಸಗಿ ಮ್ಯಾಗ್ಜಿನ್ ಗೆ ನೀಡಿದ ಪೋಟೋ ಶೂಟ್ ನಲ್ಲಿ ರಣವ್ವೀರ್ ಸಂಪೂರ್ಣ ನಗ್ನವಾಗಿ ಪೋಸ್ ನೀಡಿ ಎಲ್ಲರನ್ನೂಈ ಹುಬ್ಬೇರಿಸುವಂತೆ ಮಾಡಿದ್ದಾರೆ. ರಣ್ವೀರ್ ನ ಹೊಸ ಫೋಟೋ ಶೂಟ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿವೆ.
ತನ್ನ ವಿಶೇಷ ಡ್ರೆಸ್ ಶೈಲಿಯಿಂದ ಪದೇ ಪದೇ ಟ್ರೋಲ್ ಗೆ ಒಳಗಾಗುತ್ತಿದ್ದ ನಟ ರಣ್ವೀರ್ ಈ ಭಾರಿ ಖಾಸಗಿ ಮ್ಯಾಗಜಿನ್ನ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.
.@RanveerOfficial: the Last Bollywood Superstar https://t.co/mMuFPyFP44 pic.twitter.com/eQkD3baj17
— Paper Magazine (@papermagazine) July 21, 2022
ನಟನ ಬೆತ್ತಲೆ ಅವತಾರಕ್ಕೆ ನೆಟ್ಟಿಗರು ದೀಪಿಕಾರನ್ನ ಪ್ರಶ್ನಿಸಿದ್ದಾರೆ. ದೀಪಿಕಾ ಪಡುಕೋಣೆ ಅವರೇ ಸ್ವಲ್ಪ ಈ ಕಡೆ ನೋಡಿ ಎಂದು ದೀಪಿಕಾಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪತಿಗೆ ತಿಳಿ ಹೇಳಿ ಎಂದು ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಖಾಸಗಿ ಮ್ಯಾಗಜಿನ್ವೊಂದಕ್ಕೆ ಬೆತ್ತಲೆ ಫೋಟೋಶೂಟ್ ಅಷ್ಟೇ ನೀಡಿರುವುದಲ್ಲ. ಸಂದರ್ಶನ ಕೂಡ ನೀಡಿದ್ದಾರೆ. ನಟಿಸುವಾಗ ನನಗೆ ಬೆತ್ತಲಾಗುವುದು ನನಗೆ ತುಂಬಾ ಸುಲಭ ಆದರೆ ನೋಡುಗರು ನನ್ನ ನೋಡಿ ಮುಜುಗರ ಪಡುತ್ತಾರೆ ಅಂತಾ ಹೇಳಿಕೆ ನೀಡಿದ್ದಾರೆ. ಆದರೆ ನಟನ ಚಿತ್ರಗಳು ವಿವಿಧ ರೀತಿಯಲ್ಲಿ ನೆಗೆಟಿವ್ ಆಗಿ ಟ್ರೋಲ್ ಗೆ ಒಳಗಾಗುತ್ತಿವೆ.