ಕ್ರಿಸ್ ಮಸ್ ಗೆ ‘83’ : ಟ್ರೇಲರ್ ರಿಲೀಸ್..!
ಮುಂಬೈ: ಕೊರೊನಾ ಹಾವಳಿಯಿಂದ ಬಿಡುಗಡೆಯಾಗದೇ ಅಡಚಣೆ ಎದುರಿಸಿದ್ದ ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 83 ಸಿನಿಮಾದ ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ಗೆ ರಿಲೀಸ್ ಆಗ್ತಿದೆ.. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ಸಿಕ್ಕಾಪಟ್ಟೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.. ಅಭಿಮಾನಿಗಳು ಟ್ರೇಲರ್ ನೋಡಿ ಫುಲ್ ಫಿದಾ ಆಗಿದ್ದಾರೆ. ಅದ್ರಲ್ಲೂ ಬರೀ ಸಿನಿಮಾ ರಸಿಕರಷ್ಟೇ ಅಲ್ಲ , ಕ್ರಿಕೆಟ್ ಅಭಿಮಾನಿಗಳೂ ಅದ್ರಲ್ಲೂ ಕಪಿಲ್ ದೇವ್ ಅವರ ಅಭಿಮಾನಿಗಳು ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ..
83 ಚಿತ್ರದ ಟ್ರೇಲರ್ ಅನ್ನು ರಣ್‍ವೀರ್ ಸಿಂಗ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 3 ನಿಮಿಷ 49 ಸೆಕೆಂಡ್ ಇರುವ ಈ ಟ್ರೇಲರ್ ಪ್ರೇಕ್ಷಕರನ್ನು 1983ಕ್ಕೆ ಕರೆದೊಯ್ಯುವಂತಿದೆ. ಭಾರತೀಯ ಕ್ರಿಕೆಟಿಗರು ವಿಶ್ವಕಪ್ ಗೆದ್ದ ಐತಿಹಾಸಿಕ ಗೆಲುವನ್ನು ಈ ಸಿನಿಮಾ ನೆನಪಿಸುತ್ತದೆ. 
ಕಪಿಲ್ ದೇವ್ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದು, ಟ್ರೇಲರ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದವರ ಜರ್ನಿ, ಅವರ ಹೋರಾಟ, ಗೆಲುವುಗಳು ಮತ್ತು ಸೋಲುಗಳನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಟ್ರೇಲರ್‌ನಲ್ಲಿ ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ರಣ್‍ವೀರ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ಶೇರ್ ಮಾಡಿಕೊಳ್ಳುವುದರ ಜೊತೆಗೆ ರಣ್‍ವೀರ್ ಸಿಂಗ್ ಅವರು, ಅಸಾಧ್ಯವಾಗದ್ದನ್ನು ಸಾಧ್ಯವಾಗಿಸಿದವರ ನೈಜ ಕಥೆಯ ಟ್ರೇಲರ್ ರಿಲೀಸ್ ಆಗಿದೆ. ಇದೇ ಡಿಸೆಂಬರ್ 24ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 3ಡಿಯಲ್ಲಿಯು ನೋಡಬಹುದು ಎಂದು ಬರೆದುಕೊಂಡಿದ್ದಾರೆ.








