rape-ಈಗಾಗಲೆ ರಾಜ್ಯಕ್ಕೆ ತಿಳಿದಿರುವಂತೆ ಕಲಬುರಗಿ ಜಿಲ್ಲೆಯ ಈ ಹಿಂದೆ ನಡೆದ ಅತ್ಯಾಚಾರದ ಘಟನೆ ಇನ್ನೂ ಮಾಸಿಲ್ಲ ಇದರ ಬೆನ್ನಲ್ಲೆ ಇನ್ನೊಂದು ಆಘಾತಕಾರಿ ಘಟನೆ ಬೇಳಕಿಗೆ ಬಂದಿದೆ.
ಆಳಂದ ತಾಲೂಕಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಧಾಕಲಾಗಿದೆ. ಭಾನುವಾರ ಆಳಂದ ತಾಲೂಕಿನ ಗ್ರಾಮದಲ್ಲಿ 70 ವರ್ಷದ ವೃದ್ದೆಯ ಮೇಲೆ 28 ವರ್ಷದ ಯುವಕ ಅತ್ಯಾಚಾರ ಮಾಡಿರುವುದು ವರದಿಯಾಗಿದೆ .
ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ಲಾಡಮುಗುಳಿ ಗ್ರಾಮದ ವೃದ್ದೆ ತನ್ನ ಮೊಮ್ಮಗಳ ಊರಾದ ಅಣ್ಣೂರು ಗ್ರಾಮದಲ್ಲಿ ವಾಸವಾಗಿದ್ದಳು, ಇದೆ ಗ್ರಾಮದ ಸಂತೋಷ್ ಎಂಬ ಯುವಕ ಈ ಕೃತ್ಯ ನಡೆಸಿದ್ದಾನೆ.
ಭಾನುವಾರ ಮಧ್ಯಾಹ್ನ ವೃದ್ದೆಯನ್ನು ಮನೆಯಲ್ಲಿ ಬಿಟ್ಟು ಮೊಮ್ಮೊಗಳು ಬಾಗಿಲು ಮುಚ್ಚಿಕೊಂಡು ಹೊರಹೋಗಿದಾಗ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಗೆ ಬಂದು ವೃದ್ದೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ವೃದ್ದೆಯನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು . ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಆಳಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.