Rape Accused C Dismissed-ಹೈದರಾಬಾದ್: ಅತ್ಯಾಚಾರ ಮತ್ತು ಅಪಹರಣ ಪ್ರಕರಣದ ಆರೋಪಿಯಾಗಿರುವ ಮಾರೆಡಪಲ್ಲಿ ಮಾಜಿ ಸರ್ಕಲ್ ಇನ್ಸ್‌ಪೆಕ್ಟರ್ ಕೆ ನಾಗೇಶ್ವರ್ ರಾವ್ ಅವರನ್ನು ಸೇವೆಯಿಂದ ವಜಾಗೊಳಿಸಿ ಬಂದಿಸಲಾಗಿದೆ.
ಹೈದರಾಬಾದ್ ಪೊಲೀಸ್ ಕಮಿಷನರ್, ಸಿವಿ ಆನಂದ್ ಅವರು ನಾಗೇಶ್ವರ್ ರಾವ್ ಅವರನ್ನ ಕೆಲಸದಿಂದ ವಜಾಗೊಳಿಸಿದ್ದಾರೆ. ನಾಗೇಶ್ವರ್ ರಾವ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಸಂತ್ರಸ್ತೆ ಮತ್ತು ಆಕೆಯ ಪತಿಯನ್ನ ಬೆದರಿಸಲು ಬಂದೂಕು ಬಳಸಿದ ಆರೋಪದ ಮೇಲೆ ತನಿಖೆ ಮುಂದುವರೆದಿದೆ.
ಜುಲೈ ಎರಡನೇ ವಾರದಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದ ವನಸ್ಥಲಿಪುರಂ ಪೊಲೀಸರು ರಂಗಾರೆಡ್ಡಿ ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಜಾಮೀನು ಕೋರಿ ಎರಡು ಬಾರಿ ಅರ್ಜಿ ತಿರಸ್ಕರಿಸಿದ ನಂತರ ಸೆಪ್ಟೆಂಬರ್ 28 ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿತು.
ಆರೋಪಿಯ ತನ್ನ ಅಧಿಕಾರದ ಸ್ಥಾನದ ದುರುಪಯೋಗ ಗೋಳಿಸಿ ಕೊಂಡಿದ್ದಾನೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಿಂದಲೇ ಈ ಕೃತ್ಯ ನಡೆದಿರುವ ಕಾರಣ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಘಟನೆ ಹಿನ್ನಲೆ
ಜುಲೈ ೬ ರಂದು ಸಂತ್ರಸ್ತೆಗೆ ವಾಟ್ಸಾಪ್ ಕರೆ ಮಾಡಿದ್ದ ಇನ್ಸ್ಪೆಕ್ಟರ್ ನಾಗೇಶ್ವರ್ ರಾವ್, ಪತಿ ಇಲ್ಲದ ಕಾರಣ ರಾತ್ರಿ ಮನೆಗೆ ಭೇಟಿ ನೀಡುವುದಾಗಿ ಹೇಳಿದ್ದ. ಇದೇ ಸಮಯದಲ್ಲಿ ಪತಿ ಇನ್ಸ್ಪೆಕ್ಟರ್ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ.
ಕೂಡಲೇ ಹೈದ್ರಾಬಾದ ನಲ್ಲಿದ್ದ ಪತಿಗೆ ಕರೆ ಮಾಡಿದ ಮಹಿಳೆ ಪತಿಗೆ ನಡೆದ ವಿಷಯ ತಿಳಿಸಿದ್ದಾಳೆ , ಇದೇ ವೇಳೆ ನಾಗೇಶ್ವರ ರಾವ್ ಸಂತ್ರಸ್ತೆಯ ಮನೆಗೆ ತೆರಳಿ ರಿವಾಲ್ವರ್‌ನಿಂದ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ಎಸೆಗಿದ್ದಾನೆ. ಅಲ್ಲದೆ ಮಧ್ಯರಾತ್ರಿಯವರೆಗೂ ಅವಳ ಮನೆಯಲ್ಲೇ ಬೀಡುಬಿಟ್ಟಿದ್ದಾನೆ.
ವಿಷಯ ತಿಳಿದು ಮನೆಗೆ ಬಂದ ಅವಳ ಪತಿ, ತನ್ನ ಮನೆಯಲ್ಲಿ ಇನ್‌ಸ್ಪೆಕ್ಟರ್‌ನನ್ನ ನೋಡಿ ಕೊಪಗೊಂಡು ಇನ್ಸ್ ಪೆಕ್ಟರ್ ಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಇನ್ಸ್‌ಪೆಕ್ಟರ್ ಮತ್ತೆ ತನ್ನ ರಿವಾಲ್ವರ್‌ನಿಂದ ಹಲ್ಲೆ ನಡೆಸಿ ಗಂಡ ಹೆಂಡತಿ ಇಬ್ಬರಿಗೂ ಬೆದರಿಕೆ ಹಾಕಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
Rape Accused CI Dismissed- Rape Accused Ex-CI Dismissed from Service








