ಅಪ್ರಾಪ್ತೆಯ ಮೇಲೆ ಅತ್ಯಾಚಾರ – 19 ವರ್ಷದ ಯುವಕ ಅರೆಸ್ಟ್
ಕೇರಳ : 19 ವರ್ಷದ ಯುವಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾರಣ ಆತನನ್ನ ಕೇರಳದ ಎರ್ನಾಕುಲಮ್ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. 2 ವರ್ಷಗಳ ಹಿಂದೆ ಅಪ್ರಾಪ್ತೆಯನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದ ಯುವಕ ಆಕೆಯ ಜೊತೆ ನಿರಂತರ ಸಂಪರ್ಕ ಹೊಂದಿದ್ದ. ಬಳಿಕ ಆತ ಪ್ರತಿದಿನ ರಾತ್ರಿ ಬಾಲಕಿಯ ಮನೆಗೆ ಕದ್ದು ಮುಚ್ಚಿ ಬರುತ್ತಾ ಇದ್ದ. ಈ ಸಂದರ್ಭದಲ್ಲಿ ಅಪ್ರಾಪ್ತೆ ಜೊತೆಗೆ ಬಲವಂತವಾಗಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಬಳಿಕ ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆಗಳನ್ನ ಗಮನಿಸಿದ್ದ ಪೋಷಕರು ಈ ಬಗ್ಗೆ ವಿಚಾರಿಸಿದಾಗ ಸತ್ಯ ಹೇಳಿದ್ದಾಳೆ.
ಇದಾದ ಬಳಿಕ ಪೋಷಕರು ಯುವಕನಿಗೆ ಮಗಳಿಂದ ದೂರವಿರುವಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೆ ಬಗ್ಗದ ಆರೋಪಿ ಸಂತ್ರಸ್ತೆಯ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದ್ರಿಂದ ರೋಸಿ ಹೋದ ಪೋಷಕರು ಆರೋಪಿ ವಿರುದ್ಧ ದೂರು ದಾಖಲು ಮಾಡಿದ ಬಳಿಕ , ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.