ಮಹಿಳಾ ಪೊಲೀಸರಿಗೆ ಇಲ್ಲಾ ಸೇಫ್ಟಿ…! ಪೊಲೀಸ್ ಅಕಾಡೆಮಿ ಶಿಕ್ಷಕನಿಂದಲೇ ರೇಪ್ : ಸಂತ್ರಸ್ತೆ ಆತ್ಮಹತ್ಯೆ
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ದಿನೇ ದಿನೇ ಅತ್ಯಚಾರ ಪ್ರಕರಣಗಳು ಹೆಚ್ಚಾಗ್ತಲೇ ಇವೆ. ಇದೀಗ ಪೊಲೀಸರಿಗೂ ಸಹ ರಕ್ಷಣೆ ಇಲ್ಲದಂತಾಗಿದೆ. ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಪೊಲೀಸ್ ಅಕಾಡೆಮಿ ಶಿಕ್ಷಕ ಅತ್ಯಚಾರವೆಸಗಿದ್ದಾನೆ. ಇದರಿಂದ ಮನನೊಂದ ಸಂತ್ರಸ್ತ ಸಬ್ ಇನ್ಸ್ ಪೆಕ್ಟರ್ ತನ್ನ ಮದುವೆಗೆ ಕೆಲ ದಿನಗಳಿರುವಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯುವಕನಿಗೆ ಥಳಿಸಿ, ಚಿತ್ರಹಿಂಸೆಕೊಟ್ಟು ಬೆಟ್ಟದ ಮೇಲಿಂದ ತಳ್ಳಿದ ಯುವತಿ ಕುಟುಂಬಸ್ಥರು…!
ಪೊಲೀಸ್ ಅಕಾಡೆಮಿ ಶಿಕ್ಷಕ ಆಕೆಯನ್ನು ಚಹಾಕ್ಕೆಂದು ಕರೆದು ನಿದ್ರೆ ಬರುವ ಮಾತ್ರೆ ಮಿಕ್ಸ್ ಮಾಡಿ ಅತ್ಯಚಾರವೆಸಗಿದ್ದಲ್ಲದೆ ಆಕೆಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ. ಇದರಿಂದ ನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಯುವತಿಯ ಕುಟುಂಬಂಸ್ಥರು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








