ಮಾನಸಿಕ ಅಸ್ವಸ್ಥೆ ಮೇಲೆ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದ ಕಾಮುಕನನ್ನ ಹಿಡಿದುಕೊಟ್ಟಿದ್ದು ಸಾಕು ನಾಯಿ..!
ತಮಿಳುನಾಡು : ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಯಾರಿಗೂ ಗೊತ್ತಾಗದಂತೆ ಅಲ್ಲಿಂಗ ಎಸ್ಕೇಪ್ ಆಗಿಬಿಡುತ್ತಿದ್ದ. ಹೀಗೆ ಅನೇಕ ಬಾರಿ ಮಾಡಿದ್ದಾನೆ. ಅದರಂತೆ ಮತ್ತೊಂದು ದಿನ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗುವ ಆ ಮನೆಯ ಸಾಕು ತಾಯಿ ಆತನ ಪ್ಯಾಂಟ್ ಹಿಡಿದು ಎಳೆದಾಡಿದೆ. ಆತನನ್ನ ಹೋಗಲು ಬಿಡದೇ ಮನೆವರೆಲ್ಲರನ್ನೂ ಎಚ್ಚರಗೊಳಿಸಿದೆ.
ಬಳಿಕ ಮನೆ ಮಂದಿಯಲ್ಲಾ ಎದ್ದು ನೋಡಿದಾಗ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ಬಳಿಕ ಆತನ ಮೊಬೈಲ್ ಕಸಿದು ನೋಡಿದಾಗ ಆಕೆಯ ಅಶ್ಲೀಲ ಫೋಟೋಗಳು ಮೊಬೈಲ್ ನಲ್ಲಿ ಸೆರೆಯಾಗಿರೋದು ಗೊತ್ತಾಗಿದೆ. ಹಲವು ಬಾರಿ ಅತ್ಯಾಚಾರವೆಸಗಿರುವ ಫೋಟೋಗಳು ಮೊಬೈಲ್ ನಲ್ಲಿ ಸಿಕ್ಕಿವೆ. ಅಲ್ಲದೇ ಸಂತ್ರಸ್ತೆ ಗರ್ಭಿಣಿಯಾಗಿರುವ ವಿಚಾರವೂ ಮನೆಮಂದಿಗೆ ತಿಳಿದಿದೆ. ಬಳಿಕ ಈತನನ್ನ ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 29 ವರ್ಷದ ದಿಲೀಪ್ ಎಂಬಾತ ಆರೋಪಿಯಾಗಿದ್ದಾನೆ. 30 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆಯ ಕುಟುಂಬದವರು ಅದೇ ಕಾಂಪೌಂಡ್ ನಲ್ಲಿಯೇ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ.
ಇದನ್ನ ಹೇಗೋ ತಿಳಿದುಕೊಂಡಿದ್ದ ಆರೋಪಿ ಪ್ರತಿನಿತ್ಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗುತ್ತಿದ್ದ. ಹೀಗೆ ಮತ್ತೊಮ್ಮ ಅತ್ಯಾಚಾರವೆಸಗಿ ಪರಾರಿಯಾಗಲು ಪ್ರಯತ್ನಿಸಿದಾಗ ಆ ಮನೆಯ ಸಾಕು ನಾಯಿ ಆತನನ್ನ ಹಿಡಿದು ಜೋರಾಗಿ ಬೊಗಳಿ ಮನೆಯವರನ್ನ ಎಬ್ಬಿಸಿದೆ. ಹೀಗೆ ಈ ಕಾಮುಕನ ಕಳ್ಳಾಟ ಬೆಳಕಿಗೆ ಬಂದಿದೆ.
ನಕ್ಸಲ್ ಅಟ್ಟಹಾಸ : 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ
ಆರೋಪ ಸಾಬೀತಾದ್ರೆ ರಮೇಶ್ ಜಾರಕಿಹೊಳಿ ಅರೆಸ್ಟ್ ಆಗೋದು ಪಕ್ಕಾ : ಬಿಸಿಪಾ
‘ನಾಲಾಯಕ್’ ಪದ ಬಳಕೆ : ನಿರಾಣಿ ವಿರುದ್ಧ ಯತ್ನಾಳ್ ಬುಸ್ ಬುಸ್
ವರುಣಾದಲ್ಲಿ ವಿಜಯೇಂದ್ರ ಹಸ್ತಕ್ಷೇಪ : ಮೌನ ಮುರಿದ ಡಾ.ಯತೀಂದ್ರ ಸಿದ್ದರಾಮಯ್ಯ







