ಅತ್ಯಾಚಾರಿಗಳಿಗೆ ಕನಸಲ್ಲೂ ಬೆಚ್ಚುವಂತಹ ಶಿಕ್ಷೆ ಕೊಡೋಕೆ ಮುಂದಾಗಿದೆ ಪಾಕಿಸ್ತಾನ
ಪಾಕಿಸ್ತಾನ : ಉಗ್ರರ ನಾಡು ಪಾಕಿಸ್ತಾನ ಯಾವುದೇ ಒಳ್ಳೆ ಕೆಲಸ ಮಾಡುತ್ತೆ ಅಂದ್ರೆ ಕೆಲವೊಮ್ಮೆ ಆಶ್ಚರ್ಯವಾಗುತ್ತೆ.. ಆದ್ರೆ ಈಗ ಪಾಕಿಸ್ತಾನ ಅತ್ಯಾಚಾರಿಗಳ ವಿರುದ್ಧ ಒಂದು ಅತ್ಯಂತ ಕಠಿಣ ಜಾರಿ ಮಾಡಲು ಮುಂದಾಗಿದ್ದು, ಪದೇ-ಪದೇ ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಇದು ಉತ್ತಮ ಶಿಕ್ಷೆ ಅಂತಲೇ ಹೇಳಬಹುದು..
ಹೌದು ಆಗಾಗ ಲೈಂಗಿಕ ದೌರ್ಜನ್ಯಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗುವವರಿಗೆ ಲೈಂಗಿಕ ಉತ್ಸಾಹವನ್ನೇ ಕುಂಠಿತ ಗೊಳಿಸುವ ಶಿಕ್ಷೆಗೆ ಗುರಿ ಪಡಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ, ಸಾಕ್ಷ್ಯ ಸಂಗ್ರಹ, ವಿಚಾರಣೆ ಪೂರ್ಣ ಮತ್ತು ಲೈಂಗಿಕ ಶಕ್ತಿ ಕುಂಠಿತಗೊಳಿಸುವ ಶಿಕ್ಷೆ ಜಾರಿ ಸೇರಿದಂತೆ ಮಹತ್ವದ ಅಂಶಗಳನ್ನು ಒಳಗೊಂಡ ಮಸೂದೆಗೆ ಪಾಕ್ ಸಂಸತ್ ಬುಧವಾರ ಅಂಗೀಕಾರ ನೀಡಿದೆ.
ಪಾಕ್‍ನಲ್ಲಿ ಅತ್ಯಚಾರ ಪ್ರಕರಣದ ದೋಷಿಗಳಿಗೆ 20-25 ವರ್ಷ ಜೈಲು ಅಥವಾ ಮರಣದಂಡನೆ ವಿಧಿಸುವ ಅವಕಾಶ ಇದೆ. ಆದರೆ ಸಾವಿರಾರು ಅತ್ಯಾಚಾರ ಪ್ರಕರಣ ದಾಖಲಾದರೂ ಶಿಕ್ಷೆ ಜಾರಿಯಾಗುವ ಪ್ರಮಾಣ ಕೇವಲ ಶೇ.3 ಕ್ಕಿಂತ ಕಡಿಮೆ ಇದೆ.
ಜೊತೆಗೆ ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದೆ. ಈ ಬಗ್ಗೆ ದೇಶದಾದ್ಯಂತ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಶಿಕ್ಷೆ ಯನ್ನು ಕೆಲವೊಂದು ರಾಸಾಯನಿಕ ಬಳಸಿ ಇಂಜೆಕ್ಷನ್ ಮೂಲಕ ಜಾರಿಗೊಳಿಸಲಾಗುತ್ತದೆ.








