Rare rainbow | ಆಕಾಶದಲ್ಲಿ ಅಪರೂಪದ ಕಾಮನಬಿಲ್ಲು
ಚೀನಾದಲ್ಲಿ ಮೂಡಿದ ಕಾಮನಬಿಲ್ಲು
ಸೋಶಿಯಲ್ ಮೀಡಿಯದಲ್ಲಿ ವಿಡಿಯೋ ವೈರಲ್
ಹೈಕೌ ನಗರದಲ್ಲಿ ಕಂಡುಬಂದ ಕಾಮನಬಿಲ್ಲು
27.3 ಮಿಲಯನ್ ವೀಕ್ಷಣೆ ಪಡೆದ ವಿಡಿಯೋ
ಚೀನಾದ ಬಾನಂಗಳದಲ್ಲಿ ಅಪರೂಪದ ಕಾಮನಬಿಲ್ಲ ಕಂಡುಬಂದಿದೆ.
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹೌರಾ ಎನ್ನುತ್ತಿದ್ದಾರೆ.
ಸದ್ಯ ವಿಡಿಯೋ 27.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ಈ ವಿಡಿಯೋವನ್ನು ಆಗಸ್ಟ್ 21 ರಂದು ಸೆರೆ ಹಿಡಿಯಲಾಗಿದ್ದು, ಹೈನಾನ್ ಪ್ರಾಂತ್ಯದ ಹೈಕೌ ನಗರದಲ್ಲಿ ಚಿತ್ರೀಕರಿಸಲಾಗಿದೆ. ಇದನ್ನ ಪೈಲಿಯಸ್ ಎಂದು ಕರೆಯಲಾಗಿದೆ.
ತೇವಾಂಶವುಳ್ಳ ಗಾಳಿ ಕ್ರಮೇಣ ಘನೀಕರಣಗೊಳ್ಳುತ್ತಾ ಹೋಗುವ ಸಂಧರ್ಭದಲ್ಲಿ ಸೂರ್ಯನ ಕಿರಣಗಳು ಬಲಕೋನದಿಂದ ಬಿದ್ದಾಗ ಮೋಡದಲ್ಲಿನ ಹನಿಗಳು ಮತ್ತು ಮಂಜುಗಡ್ಡೆಯ ಸ್ಪಟಿಕಗಳ ನಡುವೆ ಬೆಳಕು ಮಿಳಿತಗೊಂಡು ಕಾಮನಬಿಲ್ಲಿನ ಬಣ್ಣಗಳು ಸೃಷ್ಟಿಯಾಗುತ್ತವೆ.








