Rashmika-ಟ್ರೋಲರಗಳ ನೆಚ್ಚಿ ಆಹಾರ ಎಂದೇ ಖ್ಯಾತಿಯಾದ ನಟಿ ರಶ್ಮಿಕಾ ಮಂದಣ್ಣಾ ಈಗ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೌದು ಇಷ್ಟು ದಿನದ ತಮ್ಮ ಮನದಾಳದ ನೋವನ್ನು ಪತ್ರದ ಮೂಲಕ ಹೋರ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ವರ್ಗದ ಜನರು ಯಾವಾಗಲೂ ಅವರನ್ನು ಟಾರ್ಗೆಟ್ ಮಾಡುತ್ತಾರೆ. ರಶ್ಮಿಕಾ ಮಂದಣ್ಣ ಎಷ್ಟೇ ಒಳ್ಳೆಯ ಸಿನಿಮಾ ಮಾಡಿದರೂ, ಎಷ್ಟೇ ದೊಡ್ಡ ಅವಕಾಶ ಪಡೆದುಕೊಂಡರೂ ಬೆನ್ನು ತಟ್ಟುವ ಬದಲು ಕೆಲವರು ನನ್ನನ್ನು ದ್ವೇಷಿಸುವುದನ್ನೆ ಉದ್ಯೋಗ ಮಾಡಿಕೊಂಡಿದ್ದಾರೆ .
ಬಹಿರಂಗ ಪತ್ರ ಬರೆದ ಮನ ನೊಂದ ರಶ್ಮಿಕಾ ಮಂದಣ್ಣಾ
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
‘ಇತ್ತೀಚಿನ ವರ್ಷಗಳಲ್ಲಿ ನನಗೆ ಕೆಲವು ವಿಚಾರಗಳು ಸಾಕಷ್ಟು ತೊಂದರೆ ನೀಡಿವೆ.
ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು’
‘ವೃತ್ತಿ ಜೀವನ ಆರಂಭ ಆದಾಗಿನಿಂದಲೂ ನನ್ನನ್ನು ದ್ವೇಷಿಸಲಾಗುತ್ತಿದೆ ಟ್ರೋಲ್ ಮತ್ತು ನೆಗೆಟಿವಿಟಿಗೆ ನಾನು ಪಂಜಿಂಗ್ ಬ್ಯಾಗ್ ರೀತಿ ಆಗಿದ್ದೇನೆ.
ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಅಂತೇನಿಲ್ಲ.
ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸಬಹುದು ಅಂತ ಅರ್ಥವಲ್ಲ’
‘ನಿಮ್ಮೆಲ್ಲರನ್ನು ರಂಜಿಸಲು ನಾನು ಸತತ ಶ್ರಮಪಡುತ್ತಿದ್ದೇನೆ. ಆ ಕೆಲಸದ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ.
ನಾನು ಮತ್ತು ನೀವು ಇಬ್ಬರೂ ಹೆಮ್ಮೆ ಪಡುವಂತಹ ಕೆಲಸ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ.
ನಾನು ಹೇಳಿಲ್ಲದೇ ಇರುವ ವಿಚಾರಕ್ಕೆ ನನ್ನನ್ನು ಟ್ರೋಲ್ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ’
‘ಸಂದರ್ಶನಗಳಲ್ಲಿ ನಾನು ಹೇಳಿದ್ದನ್ನು ನನ್ನ ವಿರುದ್ಧವೇ ತಿರುಗಿಸಲಾಗಿದೆ.
ನನಗೆ ಮತ್ತು ನನ್ನ ಸಂಬಂಧಗಳಿಗೆ ಹಾನಿ ಆಗುವಂತಹ ತಪ್ಪು ಕಥೆಗಳನ್ನು ಇಂಟರ್ನೆಟ್ನಲ್ಲಿ ಹರಡಿಸಲಾಗಿದೆ. ಒಳ್ಳೆಯ ಟೀಕೆಯನ್ನು ನಾನು ಸ್ವಾಗತಿಸುತ್ತೇನೆ.
ಅದರಿಂದ ಬೆಳವಣಿಗೆ ಸಾಧ್ಯ. ಆದರೆ ನೆಗೆಟಿವಿಟಿ ಮತ್ತು ದ್ವೇಷದಿಂದ ಏನು ಸಾಧ್ಯ’
ಈ ರಶ್ಮಿಕಾ ಮಂದಣ್ಣ ಅವರ ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ದುಃಖ ಭರಿತ ಪತ್ರಕ್ಕೆ ಕೆಲ ಸಿನಿಮಾ ತಾರೆಯರಾದ ದುಲ್ಕರ್ ಸಲ್ಮಾನ್, ತಾನ್ಯಾ ಹೋಪ್ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಈ ಮೂಲಕ ರಶ್ಮಿ ಕಾಗೆ ಸಪೋರ್ಟ ಮಾಡಿದ್ದಾರೆ.