Rashmika : ಉರ್ಫಿ 2.0 , ರಶ್ಮಿಕಾರನ್ನ ಹೀಗೆ ಕರೆಯುತ್ತಿರೋದ್ಯಾಕೆ ನೆಟ್ಟಿಗರು..??
ಉರ್ಫಿ ಜಾವೇದ್…
ಈ ಹೆಸರು ಗೊತ್ತಿಲ್ಲದವರಿದ್ದಾರೆ ಅಂದ್ರೆ ಅದು ಆಶ್ಚರ್ಯವೇ ಸರಿ..
ಚಿತ್ರ ವಿಚಿತ್ರ ಬಟ್ಟೆಗಳನ್ನ ಧರಿಸಿ ಕೊಂಚವೂ ಅಂಜಿಕೊಳ್ದೇ ರಸ್ತೆಗಳಿಯುವ ಉರ್ಫಿ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಳ್ದೇ ಇರೋ ಜಾಯಮಾನದವರು..
ಯಾರ್ ಏನೇ ಹೇಳಲಿ… ನನಗಿಷ್ಟ ಬಂದಿದ್ದೇ ನಾನು ಮಾಡೋದು… ನನ್ನ ಬಟ್ಟೆ ನನ್ನ ಇಷ್ಟ ಅನ್ನೋ ಜಾಯಮಾನದವರು.. ಸುಮಾಉ 3 ಮಿಲಿಯನ್ ಗಿಂತಲೂ ಅಧಿಕ ಫ್ಯಾನ್ಸ್ ಗಳನ್ನ Instagram ನಲ್ಲಿ ಸಂಪಾದನೆ ಮಾಡಿದ್ದಾರೆ..
ಇತ್ತ ಕನ್ನಡದಿಂದಲೇ ಫೇಮಸ್ ಆಗಿ ಕನ್ನಡ ಮರೆತು ಬಾಲಿವುಡ್ ನಲ್ಲಿ ಮೆರೆಯುತ್ತಿರುವ ಟಾಲಿವುಡ್ ನಟಿ ರಶ್ಮಿಕಾ ಮಂದಣ್ಣ..
ಸಿನಿಮಾಗಿಂತ ವಿವಾದಗಳಿಂದಲೇ ಸುದ್ದಿಯಲ್ಲಿರೋದು ಹೆಚ್ಚು..
ಉರ್ಫಿ ಹಾಗೂ ರಶ್ಮಿಕಾ
ಇಬ್ಬರ ನಡುವೆ ಟ್ರೋಲ್ ಅನ್ನೋದೇ ಕಾಮನ್..
ಆದ್ರೆ ಅದ್ಯಾಕೋ ಇತ್ತೀಚೆಗೆ ರಶ್ಮಿಕಾ ಉರ್ಫಿಗೆ ಕಂಪೇರ್ ಮಾಡಿ ಟ್ರೋಲ್ ಮಾಡಲಾಗ್ತಿದೆ..
ಅದಕ್ಕೆ ಕಾರಣ ಉರ್ಫಿ ಜಾವೇದ್ ಜೀ ಸಿನಿಮಾ ಅವಾರ್ಡ್ ಸಮಾರಂಭದಲ್ಲಿ ಧರಿಸಿದ್ದ ಡ್ರೆಸ್.,.
View this post on Instagram
ಲಾಂಗ್ ಟ್ರೆಲ್ ಇರೋ ಕಪ್ಪು ಬಣ್ಣದ ಮಿನಿ ಡ್ರೆಸ್ನಲ್ಲಿ ರಶ್ಮಿಕಾ ದರ್ಶನ ಕೊಟ್ಟಿದ್ದಾರೆ. ಹೈ ಹೀಲ್ಡ್ ಚಪ್ಪಲಿ ಧರಿಸಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದಾರೆ. ತಮ್ಮ ಎಂದಿನ ಕ್ಯೂಟ್ ಕ್ಯೂಟ್ ಸ್ಮೈಲ್ ಮೂಲಕ ಪಾಪರಾಜಿಗಳ ಕಡೆ ಕೈ ಬೀಸಿದ್ದಾರೆ. ಸದ್ಯ ಈ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಶ್ಮಿಕಾ ಶಾರ್ಟ್ ಡ್ರೆಸ್ ನೋಡಿ ಟ್ರೋಲಿಗರು ತಮ್ಮ ಕೆಲಸ ಶುರು ಮಾಡಿದ್ದಾರೆ..
ಈ ನಟಿ ಉರ್ಫಿ ಜಾವೇದ್ ರನ್ನ ಫಾಲೋ ಮಾಡೋದು ಗೊತ್ತಿರಲಿಲ್ಲ, ಉರ್ಫಿ ಜಾವೇದ್ 2.0 ಅಂತೆಲ್ಲಾ ಟ್ರೋಲ್ ಮಾಡ್ತಿದ್ದಾರೆ.
ಇಂತಹವರನ್ನು ಬಾಯ್ಕಾಟ್ ಮಾಡ್ಬೇಕು. ಈಗಾಗ್ಲೇ ಫೇಮಸ್ ಆಗಿರುವವರಿಗೆ ಎಕ್ಸ್ಪೋಸ್ ಮಾಡುವ ಕರ್ಮ ಏನು, ಈ ಔಟ್ ಫಿಟ್ ನಿಜಕ್ಕೂ ಕೆಟ್ಟದಾಗಿದೆ. ಇವ್ರಿಗೆಲ್ಲಾ ಏನಾಗಿದೆ, ಇಂತಹ ಕಾಸ್ಟ್ಯೂಮ್ ಯಾಕಾದ್ರೂ ಹಾಕ್ತಾರೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ನಲ್ಲಿ ಉಗಿಯುತ್ತಿದ್ದಾರೆ.
ಒಟ್ನಲ್ಲಿ ರಶ್ಮಿಕಾ ಇದೀಗ ತಮ್ಮ ಬಟ್ಟೆ ವಿಚಾರದಿಂದ ಟ್ವರೋಲ್ ಆಗ್ತಿದ್ದಾರೆ..
ತಮ್ಮನ್ನ ಉರ್ಫಿ ಜಾವೇದ್ ಗೆ ಹೋಲಿಕೆ ಮಾಡಿ ಮಾತನಾಡುತ್ತಿರೋದಕ್ಕೆ ರಶ್ಮಿಕಾ ಪ್ರತಿಕ್ರಿಯೆ ನೀಡ್ತಾರಾ ಇಲ್ವಾ..?? ೀ ಬಾರಿಯೂ ಟ್ರೋಲ್ ಗೆ ತಲೆ ಕೆಡಿಸಿಕೊಳ್ದೇ ಸೈಲೆಂಟ್ ಆಗಿರೋ ತಂತ್ರವನ್ನೇ ಅಳವಡಿಸಿಕೊಳ್ತಾರಾ ನೋಡಬೇಕಿದೆ..
Rashmika being trolled and being called urfi 2.0 After her zee cinema award look photo got viral