ತೆಲುಗು ನಟ ನಿತಿನ್ ಅಭಿನಯದ ಭೀಷ್ಮ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಈ ಸಿನಿಮಾ ಇದೇ ತಿಂಗಳು 21ರಂದು ತೆರೆಗೆ ಬರುತ್ತಿದೆ. ಹೀಗಾಗಿ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದೆ. ಇತ್ತೀಚೆಗೆ ನಿತಿನ್ ಮತ್ತು ರಶ್ಮಿಕಾ ತೆಲುಗಿನ ಖಾಸಗಿ ಮಾಹಿನಿಯೊಂದರ ಸುದ್ದಿ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿತಿನ್, ರಶ್ಮಿಕಾ ಅವರ ಆಹಾರ ಸಂಬಂಧಿಸಿದ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ.
ನಾಯಿ ಬಿಸ್ಕತ್ ತಿಂದ್ರಂತೆ ರಶ್ಮಿಕಾ
ಸಂದರ್ಶನದಲ್ಲಿ ನಿತಿನ್ ರಶ್ಮಿಕಾ ತಿನ್ನುವ ಆಹಾರದ ಬಗ್ಗೆ ಹೇಳಿದ್ದಾರೆ. ‘ಸಾಮಾನ್ಯವಾಗಿ ಎಲ್ಲರೂ ಚಿಪ್ಸ್ , ಸಿಹಿ ತಿಂಡಿಗಳನ್ನು ಸಂಜೆ ವೇಳೆ ತಿನ್ನುತ್ತಾರೆ. ಆದರೆ ರಶ್ಮಿಕಾ ಮಾತ್ರ ನಾಯಿ ಬಿಸ್ಕತ್ ತಿನ್ನುತ್ತಾರೆ’ ಎಂಬ ವಿಷಯವನ್ನು ನಿತಿನ್ ಬಹಿರಂಗ ಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ‘ಇಲ್ಲ ನಾಯಿ ಬಿಸ್ಕತ್? ತಿನ್ನುವುದಿಲ್ಲ. ಒಂದು ಸಲ ರುಚಿ ನೋಡುವ ಸಲುವಾಗಿ ನಾಯಿ ಬಿಸ್ಕತ್ ಟೇಸ್ಟ್ ಮಾಡಿದ್ದೆ’ ಎಂದು ಹೇಳಿದ್ದಾರೆ.








