Rashmika Mandanna : ದೇವರಕೊಂಡ – ರಶ್ಮಿಕಾ ಮಂದಣ್ಣ ಪೋಟೋ ವೈರಲ್…. ಮತ್ತೆ ಡೇಟಿಂಗ್… ??
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ನಟಿಸಿದ ಗೀತ ಗೋವಿಂದಂ ಚಿತ್ರ ಹಿಟ್ ಆದ ನಂತರದಿಂದ ಈ ಜೋಡಿ ಆಗಾಗಾ ಸುದ್ದಿಯಲ್ಲಿರುತ್ತಾರ. ಇವರಿಬ್ಬರು ಲವ್ ಮಾಡುತ್ತಿದ್ದರು ಆನಂತರ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ನಂತರ ಜೋಡಿ ಮತ್ತೆ ಪ್ಯಾಚಪ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಇದೀಗ ಈ ಜೋಡಿ ಮತ್ತೆ ಒಂದಾಗಿದ್ದು ವಿಜಯ್ ದೇವರಕೊಂಡ ಜೊತೆಗಿನ ಪೋಟೋ ವಿಚಾರದಲ್ಲಿ ರಶ್ಮಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ಮತ್ತೆ ಒಂದಾಗಿರು ಈ ಜೋಡಿಗಳು ಒಟ್ಟಿಗೆ ಸುತ್ತಾಟ ನಡೆಸುತ್ತಿದ್ದಾರೆ ಎನ್ನುತ್ತಿವೆ ವೈರಲ್ ಆಗಿರುವ ಈ ಪೋಟೋ
ಸಮುದ್ರದ ಸಮೀಪದಲ್ಲಿರುವ ಸ್ವಿಮ್ಮಿಂಗ್ಪೂಲ್ನಲ್ಲಿ ನಿಂತಿರುವ ಫೋಟೋ ಅನ್ನು ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ಹಿಂಭಾಗದಲ್ಲಿ ರೆಸಾರ್ಟ್ನ ಒಂದು ಭಾಗ ಕಾಣುತ್ತದೆ. ರಶ್ಮಿಕಾ ಮಂದಣ್ಣ ಕಳೆದ ಅಕ್ಟೋಬರ್ನಲ್ಲಿ ಇದೇ ಜಾಗದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅವರ ಫೋಟೋದ ಬ್ಯಾಕ್ಗ್ರೌಂಡ್ ವಿಜಯ್ ಹಂಚಿಕೊಂಡಿರುವ ಫೋಟೋದ ಬ್ಯಾಕ್ಗ್ರೌಂಡ್ ಒಂದೇ ರೀತಿ ಇದೆ. ಹೀಗಾಗಿ, ಈ ಜೋಡಿ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದಾರೆ. ಡೇಟಿಂಗ್ ಮಾಡುತ್ತಿದ್ದಾರೆ ಎನ್ನವಂತ ಟ್ರೋಲ್ಸ್ ಗಳು ಮೀಮ್ ಗಳು ಹರಿದಾಡುತ್ತಿವೆ.
ರಶ್ಮಿಕಾ ಮಂದಣ್ಣ ನಟನೆಯ ದಳಪತಿ ವಿಜಯ್ ನಾಯಕತ್ವದ ‘ವಾರಿಸು’ ಚಿತ್ರ ಜನವರಿ 12ರಂದು ತೆರೆಗೆ ಬರುತ್ತಿದೆ.
Rashmika Mandanna : Devarakonda – Rashmika Mandanna Photo Viral….








