ರಶ್ಮಿಕಾ ಮಂದಣ್ಣ ಇನ್ ಸ್ಟಾಗ್ರಾಂನಲ್ಲಿ 1.90 ಕೋಟಿ ಫಾಲೋವರ್ಸ್..!
ಕನ್ನಡದಲ್ಲಿ 2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಮಿಂಚಿ ನ್ಯಾಷನಲ್ ಕ್ರಷ್ ಆದ ರಷ್ಮಿಕಾ ಮಂದಣ್ಣ ಸದ್ಯ ಪರಭಾಷೆಗಳಲ್ಲಿ ಶೈ ಆಗ್ತಾ ಇದ್ದಾರೆ.. ತೆಲುಗಿನಲ್ಲಿ ಸ್ಟಾರ್ ನಟಿಯರ ಲಿಸ್ಟ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಚಷ್ಮಾ ಸುಂದರಿ ತಮಿಳಿನಲ್ಲೂ ಸಿನಿಮಾ ಮಾಡಿ ಇದೀಗ ಬಾಲಿವುಡ್ ನಲ್ಲಿ 2ನೇ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ರಶ್ಮಿಕಾ ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿತ್ತಾರೆ.. ಹಾಗೇ ನೋಡೋದಾದ್ರೆ , ಹೆಚ್ಚು ಟ್ರೋಲ್ ಆಗುವ ನಟಿ ಕೂಡ ರಶ್ಮಿಕಾ ಮಂದಣ್ಣ ಅವರೇ. ಆದ್ರೂ ಎಷ್ಟೇ ಹೇಟರ್ ಗಳಿದ್ದರೂ, ಅವರೆಲ್ಲರಿಗಿಂತ ಅಭಿಮಾನಮಿಗಳೇ ಹೆಚ್ಚು ಅನ್ನೋದು ಈಗ ಸಾಬೀತಾಗಿದೆ.
ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳ ಸಂಖ್ಯೆ 1.90 ಕೋಟಿ ಆಗಿದೆ. ಈ ಬಗ್ಗೆ ವಿಡಿಯೊ ಪೋಸ್ಟ್ ಮಾಡಿರುವ ರಶ್ಮಿಕಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕೇವಲ 367 ಪೋಸ್ಟ್‌ಗಳನ್ನು ಮಾತ್ರ ಪ್ರಕಟಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ 2 ಕೋಟಿ ಫಾಲೋವರ್ಸ್‌ಗಳನ್ನು ಪಡೆಯುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಾ ರಶ್ಮಿಕಾಗೆ ಶುಭ ಹಾರೈಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಪ್ರಸ್ತುತ ಮಿಷನ್ ಮಜ್ನು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಬಾಲಿವುಡ್‌ನಲ್ಲಿ ಅವರ ಚೊಚ್ಚಲ ಚಿತ್ರವಾಗಿದೆ. ಸುಕುಮಾರ್ ನಿರ್ದೇಶನದ ಅಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಬಾಲಿವುಡ್‌ನ ಮತ್ತೊಂದು ಚಿತ್ರ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಮಗಳಾಗಿಯೂ ಬಣ್ಣ ಹಚ್ಚಿದ್ದಾರೆ..