ರಶ್ಮಿಕಾ ಮಂದಣ್ಣ ಅಪರೂಪದ ಸಾಧನೆ – ಸ್ಯಾಂಡಲ್ ವುಡ್ ನಟಿಯರಲ್ಲಿ ಇವರೇ ಮೊದಲಿಗರು..
ರಶ್ಮಿಕಾ ಮಂದಣ್ಣ. ಸದ್ಯ ಭಾರತೀಯ ಚಿತ್ರರಂಗದಿಂದ ಹಲವು ಬಾರಿ ಬಾರಿ ಕೇಳಿ ಬರುತ್ತಿರುವ ಹೆಸರು. ಕನ್ನಡದಿಂದ ಚಿತ್ರರಂಗವನ್ನ ಪ್ರವೇಶಿಸಿ ತೆಲುಗು ತಮಿಳಿನಲ್ಲಿ ಗುರುತಿಸಿಕೊಂಡು ಈಗ ಬಾಲಿವುಡ್ ನಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಬಾಲಿವುಡ್ ನಲ್ಲಿ ನಟಿಸಿರುವ ಚಿತ್ರಗಳು ಇನ್ನಷ್ಟೇ ರಿಲೀಸ್ ಆಗಬೇಕಿದೆ. ಈ ಮಧ್ಯೆ ರಶ್ಮಿಕಾ ವಿಶೇಷ ಸಾಧನೆಯನ್ನ ಮಾಡಿದ್ದಾರೆ. ಈ ವರೆಗೂ ಸ್ಯಾಂಡಲ್ ವುಡ್ ನಯಾವ ನಟಿಯೂ ಮಾಡಿಲ್ಲ ಎನ್ನುವು ವಿಶೇಷ.
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಅನುಭವಿಸಿದರು. ನಂತರ ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ ಮತ್ತು ಗೊಲ್ಡನ್ ಸ್ಟಾರ್ ಗಣೇಶ್ ಜೊತೆ ಚಮಕ್ ಚಿತ್ರಗಳಲ್ಲಿ ನಟಿಸಿದರು. ಬಳಿಕ ರಶ್ಮಿಕಾ ಪರಭಾಷೆಯತ್ತ ಮುಖ ಮಾಡಿದರು. ಚಲೋ ಚಿತ್ರದ ಮೂಲಕ ತೆಲುಗಿಗೆ ಪ್ರಾಣಾರ್ಪಣೆ ಮಾಡಿದ್ದರು.
2018 ರಲ್ಲಿ ವಿಜಯ್ ದೇವಕೊಂಡ ಜೊತೆ ನಟಿಸಿದ ‘ಗೀತಾ ಗೋವಿಂದಂ’ ತೆರೆಕಂಡಿತು. ಈ ಚಿತ್ರ ಹಿಟ್ ಆಗುತ್ತಿದ್ದಂತೆ ರಶ್ಮಿಕಾ ಖ್ಯಾತಿ ಗಣನೀಯವಾಗಿ ಹೆಚ್ಚಾಯಿತು.
ಅಕ್ಕಿನೇನಿ ನಾಗಾರ್ಜುನ ಮತ್ತು ನಾನಿ ಅಭಿನಯದ ‘ದೇವದಾಸ್’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ‘ಭೀಷ್ಮ’ ಚಿತ್ರದಲ್ಲಿ ನಿತಿನ್ ಜೊತೆ ನಟಿಸಿದ್ದರು. ನಂತರ ರಶ್ಮಿಕಾ, ಕನ್ನಡದಲ್ಲಿ ಧ್ರುವ ಸರ್ಜಾ (ಪೊಗರು), ತಮಿಳಿನಲ್ಲಿ ಕಾರ್ತಿ (ಸುಲ್ತಾನ್), ತೆಲುಗಿನಲ್ಲಿ ಮಹೇಶ್ ಬಾಬು (ಸರಿಲೇರು ನೀಕ್ವೆವರು) ಮತ್ತು ಅಲ್ಲು ಅರ್ಜುನ್ (ಪುಷ್ಪಾ) ಜೊತೆ ನಟಿಸಿದ್ದಾರೆ. ಅದಾದ ನಂತರ ರಶ್ಮಿಕಾಗೆ ಬಾಲಿವುಡ್ನಲ್ಲಿ ಬೇಡಿಕೆ ಹೆಚ್ಚಾಯಿತು.
ಸಿದ್ಧಾರ್ಥ್ ಮಲ್ಹೋತ್ರಾ (ಮಿಷನ್ ಮಜ್ನು) ಮತ್ತು ಅಮಿತಾಬ್ ಬಚ್ಚನ್ (ಗುಡ್ ಬೈ) ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸಿನಿಮಾ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಮತ್ತು ತಮಿಳು ನಟ ದಳಪತಿ ವಿಜಯ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡದ ನಟಿಯೊಬ್ಬರು ಇತರ ಸ್ಟಾರ್ ಗಳೊಂದಿಗೆ ಈ ಮಟ್ಟದಲ್ಲಿ ತೆರೆ ಹಂಚಿಕೊಂಡಿರುವುದು ಇದೇ ಮೊದಲು.
ಈ ವಿಚಾರ ರಶ್ಮಿಕಾ ಆಭಿಮಾನಿಗಳಿಗೆ ಖುಷಿಕೊಟ್ಟಿದ್ದು ಸರಿಲೇರು ನೀಕೆವ್ವರು ಎಂದು ಹಾಡಿ ಹೊಗಳುತ್ತಿದ್ದಾರೆ.








