ನಾಚುತ್ತಲೇ ಅಭಿಮಾನಿಯ ಹೃದಯಕ್ಕೆ ಆಟೋಗ್ರಾಫ್ ನೀಡಿದ ಚೆಲುವೆ…
ಮಾಡಿರುವುದು ಬೆರಳಿಣಿಕೆಯಷ್ಟು ಚಿತ್ರಗಳಾದರೂ ನ್ಯಾಷನಲ್ ಕ್ರಷ ಮಟ್ಟಕ್ಕೆ ಬೆಳದ ನಟಿ ಎಂದರೇ ಅದು ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿಯಿಂದ ಹಿಂದಿಯ ಗುಡ್ ಬೈ ವರೆಗೆನ ಪ್ರಯಾಣದಲ್ಲಿ ರಶ್ಮಿಕಾಗೆ ಸಿಹಿ ಸಿಕ್ಕಿದ್ದೆ ಹೆಚ್ಚು. ಕಳೆದ ವರ್ಷ ತೆರೆಕಂಡ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ರಶ್ಮಿಕಾ ಮುಂಬೈನ ಹೋಟೆಲ್ಗೆ ಹೋಗುತ್ತಿದ್ದಾಗ ಅಭಿಮಾನಿಯೊಬ್ಬರು ಆಕೆಯ ಆಟೋಗ್ರಾಫ್ಗೆ ವಿನಂತಿಸಿದ್ದಾರೆ. ಅದು ಕೂಡ ಅವನ ಎದೆಯ ಮೇಲೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಶ್ಮಿಕಾ ಹೋಟೆಲ್ ನಿಂದ ಹೊರ ಬರುತ್ತಿದ್ದಾರೆ. ಅಭಿಮಾನಿಯೊಬ್ಬ ಸುಂದರಿಯ ಬಳಿ ಓಡೋಡಿ ಬಂದು ತನ್ನ ಆಟೋಗ್ರಾಫ್ ನೀಡುವಂತೆ ವಿನಂತಿಸುತ್ತಾನೆ. ಹೃದಯದ ಮೇಲೆ ಸಹಿ ಮಾಡುವಾಗ ರಶ್ಮಿಕಾ ನಾಚಿಕೊಂಡಿ ಆಟೋಗ್ರಾಫ್ ನೀಡುತ್ತಾಳೆ. ಬಳಿಕ ಸುಂದರಿಯ ಕೈ ಹಿಡಿದು ಅಭಿಮಾನಿ ಧನ್ಯವಾದ ಅರ್ಪಿಸುತ್ತಾನೆ.
https://www.instagram.com/p/Ci991pZjlZp/?utm_source=ig_embed&utm_campaign=embed_video_watch_again
ಈ ವೈರಲ್ ವಿಡಿಯೋ ನೋಡಿದ ಹಲವು ನೆಟ್ಟಿಗರು ರಶ್ಮಿಕಾ ಅವರನ್ನು ಶ್ಲಾಘಿಸುತ್ತಿದ್ದಾರೆ. ‘ವೆರಿ ನೈಸ್ ಪರ್ಸನ್’, ‘ವೆರಿ ಬ್ಯೂಟಿಫುಲ್’ ಎಂದು ಒಬ್ಬರ ಹಿಂದೆ ಒಬ್ಬರು ಕಮೆಂಟ್ ಮಾಡುತ್ತಿದ್ದಾರೆ.
ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ ನಲ್ಲಿ ನಟಿಸುತ್ತಿದ್ದಾರೆ. ವಿಜಯ ಜೊತೆ ವಾರಿಸು ಚಿತ್ರದಲ್ಲೂಈ ಬಣ್ಣ ಹಚ್ಚುತ್ತಿದ್ದಾರೆ. ಹಾಗೆಯೇ.. ಅಮಿತಾಬ್ ಬಚ್ಚನ್ ಜೊತೆ ‘ಥ್ಯಾಂಕ್ಯೂ’, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ ಹಾಗೂ ವರುಣ್ ಧವನ್ ಜೊತೆ ಸಿನಿಮಾ ಮಾಡಿ ಬಾಲಿವುಡ್ ನಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದಾರೆ.
Rashmika mandanna: Recently Rashmika was on her way to a hotel in Mumbai when a fan requested her autograph. That too on his chest, this video has gone viral on social media.