Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವಿಜಯ್ ಜೊತೆ ವಾರಿಸು ನಂತರ ಯಾವುದೇ ಹೊಸ ಚಿತ್ರ ಒಪ್ಪಿಕೊಂಡಿದ್ದು ಸುದ್ದಿಯಾಗಿರಲಿಲ್ಲ. ಇದೀಗ ತೆಲುಗಿನಲ್ಲಿ ಹೊಸ ಸಿನಿಮಾ ಒಪ್ಪಕ್ಕೊಂಡಿದ್ದಾರೆ. ಟಾಲಿವುಡ್ ಯಂಗ್ ಹೀರೋ ನಿತಿನ್ ಜೊತೆ ಭೀಷ್ಮ ಚಿತ್ರದ ನಂತರ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ನಿನ್ನೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ನಟ ನಿತಿನ್ ಪ್ರಸ್ತುತ ಅವರು ವಕ್ಕಂತಂ ವಂಶಿ ನಿರ್ದೇಶನದಲ್ಲಿ ತಮ್ಮ 32 ನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಮತ್ತೊಂದು ಹೊಸ ಸಿನಿಮಾ ಆರಂಭಿಸಿದ್ದು, ಭೀಷ್ಮಾದಂತಹ ಸೂಪರ್ ಹಿಟ್ ನೀಡಿದ ವೆಂಕಿ ಕುಡುಮುಲ ಮತ್ತೊಮ್ಮೆ ಆಕ್ಷನ್ ಕಟ್ ಹೇಳಲಿದ್ದಾರೆ.
ಭೀಷ್ಮ ಚಿತ್ರದ ಯಶಸ್ಸಿನ ನಂತರ ವೆಂಕಿ ಕುಡುಮುಲ ಚಿರಂಜೀವಿ ಜೊತೆ ಸಿನಿಮಾ ಮಾಡಲು ಹೊರಟಿದ್ದರು, ಕಾರಣಾಂತರಗಳಿಂದ ಈ ಚಿತ್ರ ಸೆಟ್ಟೇರಲಿಲ್ಲ. ಇದೀಗ ಅವರು ಮತ್ತೆ ನಿತಿನ್ ಜೊತೆಗಿನ ತಮ್ಮ ಮುಂದಿನ ಚಿತ್ರವನ್ನ ಘೋಷಿಸಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಿರ್ದೇಶಕರಾದ ಮಾಲಿನೇನಿ ಗೋಪಿಚಂದ್, ಬಾಬಿ, ಹನು ರಾಘವಪುಡಿ, ಬುಚ್ಚಿ ಬಾಬು ಮತ್ತು ಚಿತ್ರತಂಡ ಉಪಸ್ಥಿತರಿದ್ದರು. ತಮಿಳು ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.
Rashmika Mandanna : Rashmika who announced another new movie with Tollywood hero Nitin…