‘ರಶ್ಮಿಕಾ ಮಂದಣ್ಣ ಸೈಕೋ’….!!!! ಹೀಗ್ ಹೇಳಿದ್ ಯಾರು ಗೊತ್ತಾ..???
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಫೇಮ ಗಳಿಸಿ ನ್ಯಾಷನಲ್ ಕ್ರಶ್ ಆದ ರಶ್ಮಿಕಾ ಇದೀಗ ಕನ್ನಡ ಮರೆತು , ಕನ್ನಡ ಇಂಸ್ಟ್ರಿಗೆ ಟಾಟಾ ಹೇಳಿ ಟಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ.. ಟಾಲಿವುಡ್ , ಬಾಲಿವುಡ್ ನ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಕಾಲಿವುಡ್ ನಲ್ಲೂ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.. ಸಿನಿಮಾಗಳು ಮಾತ್ರವೇ ಅಲ್ಲ , ಹೆಚ್ಚು ಟ್ರೋಲ್ ಆಗುವ ನಟಿಯೂ ರಶ್ಮಿಕಾ ಅವರೇ..
ಸಿನಿಮಾಗಳ ಹೊರತಾಗಿ ರಶ್ಮಿಕಾ ಜಾಹಿರಾತುಗಳಲ್ಲೂ ಬ್ಯುಸಿಯಿರುತ್ತಾರೆ.. ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಶಪಟ್ಟೆ ಒಂದ್ ರೀತಿ ಹೈಪರ್ ಆಕ್ಟೀವ್ ಆಗಿರುವ ರಶ್ಮಿಕಾ ಆಗಾಗ ಫೋಟೋಗಳನ್ನ ಹಂಚಿಕೊಳ್ತಾ ,,, ಜಿಮ್ ನಲ್ಲಿ ವರ್ಕೌಟ್ ಬಗ್ಗೆ , ತಮ್ಮ ಫಿಟ್ ನೆಸ್ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ.. ಕೆಲವೊಮ್ಮೆ ವಿಚಿತ್ರ ಫೋಟೋಗಳನ್ನ ಶೇರ್ ಮಾಡಿರುದು ಉಂಟು..
ಈಗ ರಶ್ಮಿಕಾ ಜಿಮ್ ನಲ್ಲಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದು , ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.. ಇದಕ್ಕೆ ಅವರು ಕೊಟ್ಟ ಕ್ಯಾಪ್ಷನ್ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.. ಹೌದು ರಶ್ಮಿಕಾ ತಮ್ಮನ್ನ ತಾವು ಸೈಕೋ ಎಂದು ಕರೆದುಕೊಂಡಿದ್ದಾರೆ..
ರಶ್ಮಿಕಾ ಅವರು ಜಿಮ್‌ನಲ್ಲಿ ಇರುವ ಫೊಟೋ ಒಂದನ್ನು ಹಂಚಿಕೊಂಡಿದ್ದಾರೆ. “ನಾನೊಬ್ಬಳೇ ಜಿಮ್ ನಲ್ಲಿ ವಾಸ ಮಾಡುವ ಸೈಕೋ ಎಂದು ಮತ್ತೆ ಸಾಬೀತಾಯಿತು” ಎಂದು ಬರೆದಿದ್ದಾರೆ.
ಸದ್ಯ ರಶ್ಮಿಕಾ ಅಭಿನಯದ ಪುಷ್ಪಾ ಸಿನಿಮಾ ಸೂಪರ್ ಹಿಟ್ ಆಗಿದ್ದು, ಪುಷ್ಪ 2 ನಲ್ಲಿ ರಶ್ಮಿಕಾ ಬ್ಯುಸಿಯಿದ್ದಾರೆ.. ಅಲ್ದೇ ಈ ಸಿನಿಮಾಗಾಗಿ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದು , 3 ಕೋಟಿ ಪಡೆಯುತ್ತಿದ್ದಾರೆ ಅನ್ನೋದು ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿರುವ ಕಬರ್.. ಒಂದು ವೇಳೆ ಈ ಸುದ್ದಿ ನಿಜವೇ ಆದ್ರೆ , ರಶ್ಮಿಕಾ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಲಿವುಡ್ / ಸೌತ್ ಸಿನಿಮಾದ ನಟಿಯಾಗಲಿದ್ದಾರೆ.
https://www.instagram.com/p/CYvoFloJio8/?utm_source=ig_embed&ig_rid=3b60d1f6-96e1-4200-9b12-9979c9962b1a








