ಟ್ರೋಲ್ ಗಳಿಗೆ ಡೊಂಟ್ ಕೇರ್ : ವಿಲಕ್ಷಣ ಫೋಟೋ ಹಂಚಿಕೊಂಡ ರಶ್ಮಿಕಾ
ಬೆಂಗಳೂರು : ಅತಿ ಕಡಿಮೆ ಅವಧಿಯಲ್ಲಿ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.
ಸದಾ ಕಾಲ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ರಶ್ಮಿಕಾ, ಆಗಾಗ ತಮ್ಮ ದಿನಚರಿ ಬಗ್ಗೆ ಅಪ್ ಡೇಟ್ ನೀಡ್ತಾರೆ. ಹಾಗೇ ಒಂದಿಷ್ಟು ತಮಾಷೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಅದರಂತೆ ರಶ್ಮಿಕಾ ಮಂದಣ್ಣ ವಿಜಯ ದಶಮಿ ಹಬ್ಬದ ಪ್ರಯುಕ್ತ ಈ ಫೋಟೋವನ್ನು ಹಂಚಿಕೊಂಡಿದ್ದು, ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ಇನ್ನು ಫೋಟೋ ಜೊತೆಗೆ ‘ನಾನು ತಡ ಮಾಡಿದ್ದೇನೆ ಎಂಬುದು ಗೊತ್ತು. ಆದರೂ.. ದಸರಾ ಹಬ್ಬದ ಶುಭಾಶಯಗಳು.
ಹಬ್ಬ ಎಂದರೆ ನಗು ಮತ್ತು ಸಂಭ್ರಮ. ಹಬ್ಬದಲ್ಲಿ ಮಾತ್ರವಲ್ಲದೇ ಸದಾ ಕಾಲ ಖುಷಿ ನೀಡಲು ಬಯಸುತ್ತೇನೆ.
ನನ್ನನ್ನು ಅಥವಾ ನನ್ನ ಕೆಲಸವನ್ನು ನೋಡಿದಾಗ ನಿಮ್ಮ ಮುಖದಲ್ಲಿ ಖುಷಿ ಮೂಡಿಸಲು ನಾನು ಬಯಸುತ್ತೇನೆ.
ಇದನ್ನು ಹೇಳಬೇಕು ಎನಿಸಿತು. ನೀವೆಲ್ಲರೂ ನನ್ನ ಪಾಲಿನ ಬೆಸ್ಟ್ ವ್ಯಕ್ತಿಗಳು’ ಎಂದು ಅಭಿಮಾನಿಗಳಿಗೆ ರಶ್ಮಿಕಾ ವಿಶ್ ಮಾಡಿದ್ದಾರೆ.
ಆದ್ರೆ ಇಲ್ಲಿ ರಶ್ಮಿಕಾ ಹಂಚಿಕೊಂಡಿರುವ ಫೋಟೋ ಕೊಂಚ ವಿಲಕ್ಷಣವಾಗಿದೆ. ಆದರೂ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ.
ಅಂದಹಾಗೆ ರಶ್ಮಿಕಾ ಸಿನಿಮಾ ಸುದ್ದಿ ಮಾತ್ರವಲ್ಲದೇ ಟ್ರೋಲ್ ಆಗಿಯೂ ಹೆಚ್ಚು ಸದ್ದು ಮಾಡುತ್ತಾರೆ.
ಟ್ರೋಲಿಗರು ಸದಾ ಒಂದಿಲ್ಲಾ ಒಂದು ವಿಷಯದಲ್ಲಿ ರಶ್ಮಿಕಾರನ್ನ ಟ್ರೋಲ್ ಮಾಡುತ್ತಲೇ ಇರುತ್ತಾರೆ.
ಆದ್ರೆ ರಶ್ಮಿಕಾ ಮಾತ್ರ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮಗಿಷ್ಟ ಬಂದಾಗೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.









