ಮತ್ತೆ ಒಟ್ಟಿಗೆ ಕಾಣಿಕೊಂಡ ರೂಮರ್ಡ್ ಲವ್ ಬರ್ಡ್ಸ್ : ರಶ್ಮಿಕಾ – ದೇವರಕೊಂಡ
ಮುಂಬೈ : ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಹಿಟ್ ಆಗಿ ಈಗ ಟಾಲಿವುಡ್ ನಲ್ಲಿ ನೆಲೆ ಕಂಡುಕೊಂಡಿರುವ ರಶ್ಮಿಕಾ ಮಂದಣ್ಣ ಹೆಚ್ಚು ಟ್ರೋಲ್ ಆಗ ನಟಿಯೂ ಹೌದು , ಹೆಚ್ಚು ಸುದ್ದಿಯಲ್ಲಿರುವ ತಾರೆಯೂ ಹೌದು.. ಅದ್ರಲ್ಲೂ ರಶ್ಮಿಕಾ ನಟ ವಿಜಯ್ ದೇವರಕೊಂಡ ಜೊತೆ ಸಾಕಷ್ಟು ಒಡನಾಟವಿಟ್ಟುಕೊಂಡಿದ್ದು, ಆಗಾಗ ಅವರ ಜೊತೆಗೆ ಕಾಣಿಸಿಕೊಳ್ಳೋದೇ ಹೆಚ್ಚು.. ಅದಕ್ಕೂ ಮೀರಿ ಇವರಿಬ್ಬರೂ ಕೂಡ ಪ್ರೀತಿಯಲ್ಲಿದ್ದಾರೆ ಅನ್ನೋ ವದಂತಿಗಳೂ ಕೂಡ ಇವೆ..
ಆಗಾಗ ಇವರು ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು ಫೋಟೋಗಳು ವೈರಲ್ ಆಗಿವೆ.. ಈಗ ಮತ್ತೆ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ಈ ವಿಡಿಯೋಗೆ ಕಮೆಂಟ್ಸ್ , ಲೈಕ್ಸ್ ಗಳು ಹರಿದುಬರುತ್ತಿವೆ.. ನೆಗೆಟಿವ್ ಪಾಸಿಟಿವ್ ಎರೆಡೂ ಕೂಡ..
ಖಾಸಗಿ ರೆಸ್ಟೋರೆಂಟ್ ನಿಂದ ಭಾನುವಾರ ರಾತ್ರಿ ನಟ ವಿಜಯ್ ದೇವರಕೊಂಡ ಮೊದಲು ಹೊರಗೆ ಬಂದು ತಮ್ಮ ಕಾರನ್ನು ಹತ್ತಿದ್ದಾರೆ. ನಂತರದಲ್ಲಿ ನಟಿ ರಶ್ಮಿಕಾ ಮಂದಣ್ಣ ಹೊರಗೆ ಬಂದು , ಕಾರನ್ನು ಹತ್ತಿರುವ ವೀಡಿಯೋ ಇದಾಗಿದೆ.. ಈ ಇಬ್ಬರು ಒಂದೇ ಹೋಟೆಲ್ ನಿಂದ ಹೊರಗೆ ಬಂದರೂ ಕೂಡಾ ಬೇರೆ ಬೇರೆಯಾಗಿ ಬಂದು ತಮ್ಮ ಕಾರ್ ಹತ್ತಿ ಅಲ್ಲಿಂದ ಹೊರಟು ಹೋಗಿದ್ದಾರೆ.
2018ರಲ್ಲಿ ತೆರೆಕಂಡ ಗೀತಾ ಗೋವಿಂದಂ ಚಿತ್ರದಲ್ಲಿ ಮೊದಲ ಬಾರಿಗೆ ಈ ಜೋಡಿ ತೆರೆ ಹಂಚಿಕೊಂಡಿದ್ದರು. 2019ರಲ್ಲಿ ತೆರೆ ಕಂಡ ಡಿಯರ್ ಕಾಮ್ರೆಡ್ ಸಿನೆಮಾದಲ್ಲಿ ಈ ಜೋಡಿಯ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ರು..
ಸದ್ಯ ಪುರಿ ಜಗನ್ನಾಥ್ ಅವರ ಮುಂಬರುವ ಚಿತ್ರ ಲೈಗರ್ ನಲ್ಲಿ ವಿಜಯ್ ದೇವರಕೊಂಡ ಬ್ಯುಸಿಯಿದ್ರೆ , ರಶ್ಮಿಕಾ ಕೂಡ ತಮ್ಮ ಸಿನಿಮಾಗಳು , ಜಾಹಿರಾತಿನಲ್ಲಿ ಬ್ಯುಸಿಯಿದ್ದಾರೆ.. ಅಲ್ಲದೇ ರಶ್ಮಿಕಾ ನಟನೆಯ ಪುಷ್ಪ ಸಿನಿಮಾ ತೆರೆಕಂಡು ಉತ್ತಮ ಪ್ರದರ್ಶನ ಕಾಣ್ತಿದೆ..
https://www.instagram.com/reel/CXrJIgQFLL2/?utm_source=ig_web_copy_link








