‘ಚಷ್ಮಾ ಸುಂದರಿ’ಗೆ ಈ ಸ್ಟಾರ್ ನಟನ ಜೊತೆ ಡೇಟ್ ಹೋಗುವ ಆಸೆಯಂತೆ…!
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಷ್ಮಾ ಸುಮದರಿಯ ನಸೀಬ್ ಬದಲಾಗಿಬಿಟ್ಟಿದೆ.. ಸಾನವಿಯಾಗಿ ಎಲ್ಲರನ್ನೂ ಮೋಡಿ ಮಾಡಿ ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಟಾಲಿವುಡ್ , ಕಾಲಿವುಡ್ ನಲ್ಲಿ ಮಿಂಚಿ ಈಗ ಬಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ.. ಬಾಲಿವುಡ್ ನಲ್ಲಿ ಈಗಾಗಲೇ ಒಂದು ಸಿನಿಮಾದ ಶೂಟಿಂಗ್ ಮುಗಿಸಿ ಅಮಿತಾಬ್ ಬಚ್ಚನ್ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ..
ರಶ್ಮಿಕಾ ಸದ್ಯ ಆಗಾಗ ಕಾಂಟ್ರವರ್ಸಿ ವದಂತಿಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.. ಅಲ್ದೇ ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಹೆಸರು ಕೇಳಿಬರುತ್ತಲೇ ಇರುತ್ತೆ.. ಇದಕ್ಕೆ ಪೂರಕವೆಂಬಂತೆ ಇಬ್ಬರೂ ಹಲವು ಬಾರಿ ಒಟ್ಟಾಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.. ಈ ನಡುವೆ ರಶ್ಮಿಕಾ ಟಾಲಿವುಡ್ ನ ಸ್ಟಾರ್ ನಟನ ಜೊತೆಗೆ ಡೇಟ್ ಹೋಗುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ… ಅಂದ್ಹಾಗೆ ಆ ಸ್ಟಾರ್ ನಟ ಬಾಹುಬಲಿ ಖ್ಯಾತಿಯ ಪ್ರಭಾಸ್…
ಹೌದು… ರಶ್ಮಿಕಾ ಮಂದಣ್ಣರಿಗೆ ನಟ ಪ್ರಭಾಸ್ ಜೊತೆಗೆ ಡೇಟ್ಗೆ ಹೋಗಲು ಆಸೆಯಂತೆ. ಆ ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೇ ‘ನನಗೆ ಪ್ರಭಾಸ್ ಮೇಲೆ ಕ್ರಶ್ ಇದೆ’ ಎಂದಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆ ತಾನು ತಮಿಳು ಮನೆಯ ಸೊಸೆಯಾಗಬೇಕೆಂಬ ಆಸೆಯನ್ನ ವ್ಯಕ್ತಪಡಿಸಿ ರಶ್ಮಿಕಾ ಸುದ್ದಿಯಾಗಿದ್ದರು. ಒಟ್ನಲ್ಲಿ ರಶ್ಮಿಕಾ ಏನೇ ಮಾಡಿದ್ರು ಸದಾ ಲೈಮ್ ಲೈಟ್ ನಲ್ಲೇ ಇರೋದಂತು ಸತ್ಯ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.