ಮತ್ತೆ ವಿಜಯ್ ದೇವರಕೊಂಡ ಜೊತೆ ಜಿಮ್ ನಲ್ಲಿ ಕಾಣಿಸಿಕೊಂಡ ‘ಕಿರಿಕ್ ಸುಂದರಿ’
ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಕ್ಸಸ್ ಕಂಡು ಟಾಲಿವುಡ್ ನಲ್ಲಿ ನೆಲೆ ಕಂಡುಕೊಂಡಿರುವ ಕಿರಿಕ್ ಬೆಡಗಿ ರಷ್ಮಿಕಾ ಸದ್ಯ ಸಿನಿಮಾಗಳಿಗಿಂದ ಟ್ರೋಲ್ ಗಳ ಮೂಲಕವೇ ಸುದ್ದಿಯಲ್ಲಿರೋದು ಹೆಚ್ಚು.. ಅದ್ರಲಲ್ಲೂ ರೆಕ್ಷಿತ್ ಶೆಟ್ಟಿ ಜೊತೆಗೆ ಬ್ರೇಕ್ ಆಗೋಕೆ ಪ್ರಮುಖ ಕಾರಣ ಅಂತಲೇ ಟ್ರೋಲ್ ಆಗಿದ್ದ ಟಾಲಿವುಡ್ ನ ಸೆನ್ಷೇಶನಲ್ ನಟ ವಿಜಯ್ ದೇವರಕೊಂಡ ಜೊತೆಗೆ ಆಗಾಗ ರಶ್ಮಿಕಾ ಕಾಣಿಸಿಕೊಳ್ತಾನೆ ಇರ್ತಾರೆ ಇದು ಅವರಿಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ ಅನ್ನೋ ವದಂತಿಗೆ ತುಪ್ಪ ಸುರಿಯುತ್ತಿರುತ್ತೆ.
ಈ ಹಿಂದೆ ದೇವರಕೊಂಡ ಜೊತೆಗೆ ಜಿಮ್ ನಿಂದ ಒಟ್ಟಿಗೆ ಬಂದು ಕ್ಯಾಮೆರಾ ಕಣ್ಣಿಗೆ ತಗಲಾಕೊಂಡಿದ್ದ ರಶ್ಮಿಕಾ ಇದೀಗ ಮತ್ತೆ ಜಿಮ್ ನಲ್ಲಿ ವಿಜಯ್ ಜೊತೆ ಒಟ್ಟಿಗೆ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಇವರಿಬ್ಬರೂ ಒಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.








