RSS ಗೆ 100 ವರ್ಷ : ಮರು ಸಂಘಟನೆಗೊಳ್ಳಲಿವೆ 40 ಕ್ಕೂ ಹೆಚ್ಚು ಅಂಗಸಂಸ್ಥೆಗಳು…
25 ಸೆಪ್ಟೆಂಬರ್ 2025 ರಂದು, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆಯ 100 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಘ ತನ್ನ 40 ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಮರುಸಂಘಟಿಸಲಿದೆ. ಡಿಜಿಟಲ್ ಯುಗ ಮತ್ತು ಬದಲಾಗುತ್ತಿರುವ ಭೌಗೋಳಿಕ ಮತ್ತು ಆರ್ಥಿಕ ಪರಿಸರಕ್ಕೆ ಅನುಗುಣವಾಗಿ ಅವುಗಳ ರಚನೆ, ಸ್ವಭಾವ ಮತ್ತು ಜವಾಬ್ದಾರಿಗಳು ಬದಲಾಗಲಿದೆ. ಈ ಪ್ರಕ್ರಿಯೆಯು ಸೆಪ್ಟೆಂಬರ್ 2022 ರಿಂದ 3 ವರ್ಷಗಳವರೆಗೆ ನಡೆಯುತ್ತದೆ.
ಕಳೆದ 97 ವರ್ಷಗಳಲ್ಲಿ, RSS ತನ್ನದೇ ಆದ ಸಂಸ್ಥೆಗಳನ್ನ ರಚಿಸಿದೆ ಮತ್ತು 80 ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿದೆ. ಸಂಘವು ಶಿಕ್ಷಣ, ಸಮಾಜ ಸೇವೆ, ಪ್ರಕಟಣೆಗಳು, ಚಿಂತಕರ ಚಾವಡಿಗಳಂತಹ ಮೂರು ಡಜನ್ಗಿಂತಲೂ ಹೆಚ್ಚು ವಿಷಯಗಳಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿದೆ. ಈಗ ಇವುಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಸಂಘ ನಿರ್ಧರಿಸಿದೆ.
ಇವು ಸಂಘದ ಪ್ರಮುಖ ಅಂಗ ಸಂಸ್ಥೆಗಳು
ವಿಶ್ವ ಹಿಂದೂ ಪರಿಷತ್, ಸೇವಾ ಭಾರತಿ, ಸ್ವದೇಶಿ ಜಾಗರಣ ಮಂಚ್, ವನವಾಸಿ ಕಲ್ಯಾಣ ಆಶ್ರಮ, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ, ವಿಶ್ವ ಸಂವಾದ ಕೇಂದ್ರ, ರಾಷ್ಟ್ರ ಸೇವಿಕಾ ಸಮಿತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮುಸ್ಲಿಂ ರಾಷ್ಟ್ರೀಯ ವೇದಿಕೆ, ರಾಷ್ಟ್ರೀಯ ಸಿಖ್ ಸಂಗತ್, ಹಿಂದೂ ಜಾಗರಣ್ ಮಂಚ್, ಹಿಂದೂ ಸ್ವಯಂ ಮಂಚ್, ಸಂಘ, ವಿವೇಕಾನಂದ ಕೇಂದ್ರ, ವಿದ್ಯಾ ಭಾರತಿ, ಸಹಕಾರ ಭಾರತಿ.