ಮಹಾಭಾರತ ಧಾರಾವಾಹಿ ಖ್ಯಾತಿಯ ನಟ ರಿಸಿಕ್ ಧವೆ ವಿಧಿವಶ..
ಗುಜರಾತಿ ಸೇರಿದಂತೆ ಹಲವು ಭಾಷೆಗಳ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ ‘ಮಹಾಭಾರತ’ ಧಾರಾವಾಹಿ ಖ್ಯಾತಿಯ ನಟ ರಸಿಕ್ ಧವೆ ವಿಧಿವಶರಾಗಿದ್ದಾರೆ.. ಮುಂಬೈನ ನಿವಾಸದಲ್ಲಿ ( ಜುಲೈ 29) ರಸಿಕ್ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ..
65 ವರ್ಷದ ರಾಸಿಕ್ ಧವೆ ದೀರ್ಘಕಾಲದ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಅವರ ಸ್ಥಿತಿ ಹದಗೆಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ರಸಿಕ್ ತಮ್ಮ ಪತ್ನಿ ನಟಿ ಕೇತಕಿ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ರಸಿಕ್ ಅವರ ಅಗಲಿಕೆ ಕಲಾವಿದರು ಕಂಬನಿ ಮಿಡಿದ್ದಾರೆ.. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.
ರಾಸಿಕ್ 1982 ರಲ್ಲಿ ಗುಜರಾತಿ ಚಿತ್ರ ‘ಪುತ್ರ ವಧು’ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ‘ಸಂಸ್ಕಾರ್ – ಧರೋಹರ್ ಅಪ್ನೋ ಕಿ’ ಮತ್ತು ‘ಮಹಾಭಾರತ’ ದಂತಹ ಅನೇಕ ಹಿಂದಿ ಶೋಗಳ ಮೂಲಕ ಜನಪ್ರಿಯರಾಗಿದ್ದರು.








