RSS ಆಸ್ಪತ್ರೆ ಹಿಂದೂಗಳಿಗೆ ಮಾತ್ರವೇ ಎಂಬ ರತನ್ ಟಾಟಾ ಪ್ರಶ್ನೆ | ಉತ್ತರಿಸಿದ ನಿತಿನ್ ಗಡ್ಕರಿ
ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಧರ್ಮದ ಆಧಾರದ ಮೇಲೆ ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದು ಕ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೆನಪಿಸಿಕೊಂಡರು.
ಪುಣೆಯ ಸಿಂಹಗಢ್ ನಲ್ಲಿ ಚಾರಿಟಬಲ್ ಆಸ್ಪತ್ರೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಮಹರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸಮಿಶ್ರದಲ್ಲಿ ಸಚಿವರಾಗಿದ್ದ ಸಮಯದಲ್ಲಿ ಔರಂಗಬಾದ್ ನಲ್ಲಿ RSS ಮುಖ್ಯಸ್ಥ ಕೆ.ಬಿ.ಹೆಡ್ಗೆವಾರ್ ಅವರ ಹೆಸರಿನ ಆಸ್ಪತ್ರೆಯೊಂದು ನಿರ್ಮಾಣವಾಗಿತ್ತು. ಅದನ್ನು ಉದ್ಯಮಿ ರತನ್ ಟಾಟಾ ಅವರು ಉದ್ಘಾಟಿಸಬೇಕು ಎಂದು RSS ಕಾರ್ಯಕಾರಿಯೊಬ್ಬರ ಬಯಕೆಯಾಗಿತ್ತು.
ಈ ಸಂಬಂಧ ಅವರು ನನ್ನ ಮುಂದೆ ಹೇಳಿ, ಹೇಗಾದರೂ ರತನ್ ಟಾಟಾರನ್ನು ಕರೆದುಕೊಂಡು ಬರಲು ಸಹಾಯ ಮಾಡಿ ಎಂದರು. ಅದಕ್ಕೊಪ್ಪಿಸಿದ ನಾನು ರತನ್ ಟಾಟಾ ಅವರನ್ನು ಸಂಪರ್ಕಿಸಿ ದೇಶದ ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಕೊಡುಗೆಯನ್ನು ಉಲ್ಲೇಖಿಸಿ ಆಸ್ಪತ್ರೆಯನ್ನು ಉದ್ಘಾಟಿಸಲು ಮನವೊಲಿಸಿದೆವು.
ಆಸ್ಪತ್ರೆ ತಲುಪಿದ ಟಾಟಾ ಅವರು ಆಸ್ಪತ್ರೆ ಹಿಂದೂ ಸಮುದಾಯದವರಿಗೆ ಮಾತ್ರವೇ ಎಂದು ಕೇಳಿದರು. ಇದಕ್ಕೆ ನಾನು ಪ್ರತಿಕ್ರಿಯಿಸಿ, ನೀವು ಯಾಕೆ ಹಾಗೆ ಯೋಚಿಸುತ್ತೀರಿ? ಎಂದ ಪ್ರಶ್ನಿಸಿದರು. ಅದಕ್ಕೆ ಅವರು ಆಸ್ಪತ್ರೆ ಆರ್‌ಎಸ್‍ಎಸ್‍ಗೆ ಸೇರಿದೆ ಎಂದರು. ಇದಕ್ಕೆ ಉತ್ತರಿಸಿದ ನಿತಿನ್ ಗಡ್ಗರಿ ಅವರು ಆರ್‌ಎಸ್‍ಎಸ್‍ನಲ್ಲಿ ಅಂತಹ ಯಾವುದೇ ಧರ್ಮದ ಆಧಾರದ ಮೇಲೆ ತಾರತಮ್ಯ ನಡೆಯುವುದಿಲ್ಲ ಎಂದು ಅವರಿಗೆ ಹೇಳಿದೆ ಎಂದು ನೆನಪಿಸಿಕೊಂಡರು.