ಭಾರತೀಯನಾಗಿರುವುದು ಅತ್ಯಂತ ದೊಡ್ಡ ಅದೃಷ್ಟ, ಭಾರತ ರತ್ನಕ್ಕಾಗಿ ಆಗ್ರಹ ಬೇಡ – ರತನ್ ಟಾಟಾ
ಮುಂಬೈ, ಫೆಬ್ರವರಿ07: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ – ‘ಭಾರತ್ ರತ್ನ’ ಪ್ರಶಸ್ತಿಗೆ ಟಾಟಾ ಅಧ್ಯಕ್ಷ ರತನ್ ಟಾಟಾ ಅವರನ್ನು ಪರಿಗಣಿಸಬೇಕು ಎಂಬ ಆಗ್ರಹದೊಂದಿಗೆ BharatRatnaForRatanTata ಎಂಬ ಹ್ಯಾಷ್ಟ್ಯಾಗ್ನಡಿ ಟ್ವಿಟರ್ನಲ್ಲಿ ಅಭಿಯಾನವೂ ಆರಂಭಗೊಂಡಿದೆ.
83 ವರ್ಷದ ಉದ್ಯಮಿ ರತನ್ ಟಾಟಾ ಶನಿವಾರ ಅನೇಕರು ವ್ಯಕ್ತಪಡಿಸಿದ ಭಾವನೆಗಳನ್ನು ಶ್ಲಾಘಿಸುತ್ತಾ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಇಂತಹ ಅಭಿಯಾನಗಳನ್ನು ನಿಲ್ಲಿಸುವಂತೆ ವಿನಂತಿಸಿದ್ದಾರೆ. ಭಾರತೀಯನಾಗಿರುವುದು ನನ್ನ ಅದೃಷ್ಟ ಎಂದು ಪರಿಗಣಿಸಿದ್ದೇನೆ ಎಂದು ಹೇಳಿದ ಅವರು, ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಲಷ್ಕರ್-ಎ-ಮುಸ್ತಫಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ಬಂಧನ
ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ರತನ್ ಟಾಟಾ, ಭಾರತ ರತ್ನ ನೀಡಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿರುವುದರ ಬಗ್ಗೆ ಸಂತೋಷವಾಗಿದ್ದರೂ, ಇಂತಹ ಅಭಿಯಾನವನ್ನು ನಿಲ್ಲಿಸುವಂತೆ ವಿನಯಪೂರ್ವಕವಾಗಿ ವಿನಂತಿಸುತ್ತೇನೆ. ನನಗೆ ಭಾರತೀಯನಾಗಿರುವುದು ಅತ್ಯಂತ ದೊಡ್ಡ ಅದೃಷ್ಟ, ಭಾರತ ರತ್ನಕ್ಕಾಗಿ ಆಗ್ರಹ ಬೇಡ ಎಂದು ಕೋರಿಕೊಂಡಿದ್ದಾರೆ.
While I appreciate the sentiments expressed by a section of the social media in terms of an award, I would humbly like to request that such campaigns be discontinued.
Instead, I consider myself fortunate to be an Indian and to try and contribute to India’s growth and prosperity pic.twitter.com/CzEimjJPp5
— Ratan N. Tata (@RNTata2000) February 6, 2021
#BharatRatnaForRatanTata’ ಟ್ವಿಟ್ಟರ್ ಅಭಿಯಾನವನ್ನು ಬಡಾ ಬಿಸಿನೆಸ್ ‘ಸಿಇಒ ಡಾ.ವಿವೇಕ್ ಬಿಂದ್ರಾ ಟ್ವಿಟ್ಟರ್ ನಲ್ಲಿ ಪ್ರಾರಂಭಿಸಿದರು.
ಈ ಹಿಂದೆ, ಶುಕ್ರವಾರ, ಡಾ.ಬಿಂದ್ರಾ ಅವರು, ಇಂದಿನ ಪೀಳಿಗೆಯ ಉದ್ಯಮಿಗಳು ಭಾರತವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು ಎಂದು ರತನ್ ಟಾಟಾ ನಂಬಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ್ ರತ್ನವನ್ನು @RNTata2000 ಗೆ ನೀಡಬಯಸುತ್ತೇವೆ ಎಂದು ಪಿಎಂಒ, ರಾಷ್ಟ್ರಪತಿ ಕೋವಿಂದ್ ಮತ್ತು ಪಿಎಂ ಮೋದಿಯವರ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿ, ಡಾ.ಬಿಂದ್ರಾ ಅವರ ಅಭಿಯಾನವನ್ನು ಹಲವಾರು ನೆಟಿಜನ್‌ಗಳು ಬೆಂಬಲಿಸಿದ್ದು, ಟಾಟಾ ಅವರ ಲೋಕೋಪಕಾರವನ್ನು ಶ್ಲಾಘಿಸಿದ್ದಾರೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಹಾ ಪ್ರಿಯರು ತಿಳಿದುಕೊಂಡಿರಬೇಕಾದ ಅತಿ ಮುಖ್ಯ ಮಾಹಿತಿಗಳು https://t.co/qRjNOVqDe4
— Saaksha TV (@SaakshaTv) February 3, 2021
ಮೊಬೈಲ್ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ – ಇಲ್ಲಿದೆ ಮಾಹಿತಿ https://t.co/emIFsqWiAo
— Saaksha TV (@SaakshaTv) February 4, 2021