ಬೆಂಗಳೂರು: ಹೃದಯಾಘಾತದಿಂದ ಇಹಲೋಕದ ಪಯಣ ಮುಗಿಸಿದ ಹಿರಿಯ ಪತ್ರಕರ್ತ, ಲೇಖಕ ರವಿ ಬೆಳಗೆರೆ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆದವು. ಹಿಂದೂ ಮುಲಕನಾಡು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿದ್ದಂತೆ ಇಬ್ಬರು ಪುತ್ರರಾದ ಕರ್ಣ ಹಾಗೂ ಹಿಮವಂತ ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಇದರೊಂದಿಗೆ ಅಕ್ಷರ ರಾಕ್ಷಸ ರವಿ ಬೆಳಗೆರೆ ಯುಗಾಂತ್ಯವಾಗಿದ್ದು, ಕುಟುಂಬ ಸದಸ್ಯರು ಹಾಗೂ ಸಹಸ್ರಾರು ಅಭಿಮಾನಿಗಳು ನೆಚ್ಚಿನ ರವಿಬೆಳಗೆರೆ ಅವರಿಗೆ ಅಂತಿಮ ವಿದಾಯ ಹೇಳಿದರು.
ಡಯಾಬಿಟಿಸ್, ಕಿಡ್ನಿ ವೈಫಲ್ಯ ಸೇರಿದಂತೆ ಹಲವು ತೊಂದರೆಗಳಿಂದ ಬಳಲುತ್ತಿದ್ದ ರವಿ ಬೆಳಗೆರೆ ಅವರಿಗೆ ಕಳೆದ ರಾತ್ರಿ ಕಚೇರಿಯಲ್ಲಿ ಮಲಗಿದ್ದಾಗ ತೀವ್ರ ಹೃದಯಾಘಾತವಾಗಿತ್ತು. ಕೂಡಲೇ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಇಂದು ಬೆಳಿಗ್ಗೆ ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ರವಿ ಬೆಳಗೆರೆ ಅವರ ಪಾರ್ಥಿವ ಶರೀರವನ್ನು ಅವರದೇ ಮಾಲೀಕತ್ವದ ಪ್ರಾರ್ಥನಾ ಶಾಲೆಯ ಆವರಣದಲ್ಲಿ ಅಂತಿಮ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಬನಶಂಕರಿಯ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು.
ಅಂತ್ಯಸಂಸ್ಕಾರದ ವಿಧಿವಿಧಾನಗಳು ಪೂರ್ಣಗೊಳ್ಳುತ್ತಿದ್ದಂತೆ ಚಿತೆಗೆ ಪಾರ್ಥಿವ ಶರೀರವನ್ನು ಇರಿಸಲಾಯಿತು. ಅಂತ್ಯಸಂಸ್ಕಾರಕ್ಕೆ ತೇಗ, ಸರ್ವೆ, ಮಾವು ಸೇರಿದಂತೆ ಉತರೆ ವೃಕ್ಷಗಳ ಒಂದು ಟೌನ್ ಸೌದೆಯನ್ನು ಬಳಲಾಯಿತು. ಅಂತ್ಯಕ್ರಿಯೆಯ ಸಂಪೂರ್ಣ ಉಸ್ತುವಾರಿ ಶಿವರಾಂ ಕೃಷ್ಣ ಎಂಬುವರ ನೇತೃತ್ವದಲ್ಲಿ ನಡೆಯಿತು. ದರ್ಬೆ, ನೀರು ಪ್ರೋಕ್ಷಣೆ ಮಾಡಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಅಳಿಯ ಶ್ರೀನಗರ ಕಿಟ್ಟಿ, ಪುತ್ರಿಯರು ಹಗೂ ಇಬ್ಬರು ಪತ್ನಿಯರು ಅಂತಿಮ ಗೌರವ ಸಲ್ಲಿಸುತ್ತಿದ್ದಂತೆ ಪುತ್ರರಾದ ಕರ್ಣ ಹಾಗೂ ಹಿಮವಂತ ಅಗ್ನಿಸ್ಪರ್ಶ ಮಾಡಿದರು. ಇದರೊಂದಿಗೆ ರವಿ ಬೆಳಗೆರೆ ಪಂಚಭೂತಗಳಲ್ಲಿ ಲೀನರಾದರು. ಕನ್ನಡ ಪತ್ರಿಕೋದ್ಯಮದ ದೈತ್ಯ ಪ್ರತಿಭೆ ರವಿ ಬೆಳಗೆರೆ ಇನ್ನು ನೆನಪು ಮಾತ್ರ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel