ದಕ್ಷ ಐಪಿಎಸ್ ಅಧಿಕಾರಿ ರವಿ . ಡಿ ಚೆನ್ನಣ್ಣನವರ್ ಅವರ ಹೆಸರಲ್ಲಿ ದೋಖಾ – ವಂಚಕ ಅಂದರ್
ರವಿ . ಡಿ ಚೆನ್ನಣ್ಣನವರ್ ಅವರ ಹೆಸರಲ್ಲಿ ದೋಖಾ
ಆಶ್ರಯ ಹೆಸರಿನಲ್ಲಿ ಮನೆ ಕೊಡಿಸುವುದಾಗಿ ವಂಚನೆ..!
ಬೆಂಗಳೂರು : ದಕ್ಷ ಐಪಿಎಸ್ ಅಧಿಕಾರಿ ರವಿ . ಡಿ ಚೆನ್ನಣ್ಣನವರ್.. ಕರುನಾಡ ಸಿಂಗಂ. ಇವರ ಹೆಸರು ಕೇಳ್ತಿದ್ದಂತೆ ಅಪರಾಧಿಗಳ ಮೈ ನಡುಗುತ್ತೆ.. ಪು ಡಿ ರೌಡಿ , ಪುಂಡರು ಕನಸಲ್ಲಿ ಬೆವರುತ್ತಾರೆ.. ಆದ್ರೆ ಇದೇ ರವಿ ಚನ್ನಣ್ಣನವರ್ ಹೆಸರು ಹೇಳಿಕೊಂಡು ವಂಚಕನೊಬ್ಬ 50 ಕ್ಕೂ ಹೆಚ್ಚು ಜನರಿಂದ ಲಕ್ಷ ಲಕ್ಷ ಪಡೆದು ಪಂಗನಾಮ ಹಾಕಿದ್ದಾನೆ..
ಹೌದು.. ಈತ ಆಶ್ರಯ ಹೆಸರಿನಲ್ಲಿ ಮನೆ ಕೊಡಿಸ್ತೀನೆಂದು ಮೋಸ ಮಾಡಿದ್ದಾನೆ.. ಉತ್ತರಹಳ್ಳಿಯ ಅರ್ಚಕ ಮಂಜುನಾಥ್ ಅಲಿಯಾಸ್ ಮಹಾಬಲ ಎಂಬಾತ ವಂಚನೆ ಮಾಡಿದ್ದಾನೆ.. ಉತ್ತರಹಳ್ಳಿ ಸುಬ್ರಹ್ಮಣ್ಯಪುರ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ್ದಾನೆ.. ತಲಾ 50 ರಿಂದ ಒಂದೂವರೆ ಲಕ್ಷದ ವರೆಗೂ ಹಣಪೀಕಿದ್ದಾನೆ. 
ಉತ್ತರಹಳ್ಳಿಯ ಆಂಜನೇಯ ದೇವಾಲಯದಲ್ಲಿ ಆರೋಪಿ ಮಂಜುನಾಥ. ದೇವಾಲಯಕ್ಕೆ ಬರ್ತಿದ್ದ ಭಕ್ತರಿಗೆ ಮನೆ ಕೊಡಿಸೋದಾಗಿ ಸರಿಯಾಗಿ ಉಂಡೇನಾಮ ಹಾಕಿದ್ದಾನೆ. ವಂಚನ ಅರ್ಚಕನ ವಿರುದ್ದ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ಪ್ರಭಾವಿ ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ತೀರ ಪರಿಚಯ ಅಂತಿದ್ದ ಈತ ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳು ಹಾಗೂ ಸೆಲೆಬ್ರೆಟಿಗಳ ಜೊತೆ ಫೊಟೊ ತೆಗೆದುಕೊಳ್ತಿದ್ದ. ಈ ಪೊಟೋಗಳನ್ನ ತೋರಿಸಿ ನಾನು ಅವರಿಗೆ ಸಂಬಂಧಿಕ ಅಂತ ಪುಂಗಿಬಿಡ್ತಿದ್ದ.
ಸಾಲದಕ್ಕೆ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ನನಗೆ ಸ್ವಂತ ಸಹೋದರ ಎನ್ನುತ್ತಿದ್ದ ಈತ ರವಿ ಡಿ ಚೆನ್ನಣ್ಣನವರ್ ಜೊತೆಗಿನ ಫೊಟೊ ತೋರಿಸಿ ಹಲವರಿಗೆ ವಂಚಿಸಿದ್ದಾನೆ. ಅಷ್ಟೇ ಅಲ್ಲ FIR ದಾಖಲಾಗ್ತಿದ್ದಂತೆ ಬೆಂಗಳೂರಿಂದ ಈತ ಎಸ್ಕೇಪ್ ಆಗಿದ್ದಾನೆ. ಹೌದು 420 ಅಡಿ ಪ್ರಕರಣ ದಾಖಲಾಗುತ್ತಿದ್ದಂತೆ, ಉತ್ತರಹಳ್ಳಿಯ ಬಾಡಿಗೆ ಮನೆಯನ್ನು ಖಾಲಿ ಮಾಡಿಕೊಂಡು ಅರ್ಚಕ ಬೆಂಗಳೂರಿನಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.








