ಲಸಿಕೆ ತಡ ಆಗುತ್ತೆ ನಾವೇನು ಮಾಡಕ್ಕೆ ಆಗಲ್ಲ : ರವಿಕುಮಾರ್
ಬೆಂಗಳೂರು : ರಾಜ್ಯದಲ್ಲಿ ಲಸಿಕೆ ಅಭಾವ ಹೆಚ್ಚಾಗಿದ್ದು, ಲಸಿಕಾ ಕೇಂದ್ರಗಳ ಬಳಿ ಜನರು ದಿನಗಟ್ಟಲೇ ಕ್ಯೂ ನಿಲ್ಲುತ್ತಿದ್ದರೂ ಲಸಿಕೆ ಸಿಗುತ್ತಿಲ್ಲ.
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಎಷ್ಟು ತಿಂಗಳು ಆಗುತ್ತೋ ಹೇಳಕ್ಕೆ ಆಗಲ್ಲ.
ದಿನ, ತಿಂಗಳುಗಳಲ್ಲಿ ಲಸಿಕೆ ಪೂರೈಕೆ ಅಸಾಧ್ಯ, ವರ್ಷಗಳು ಬೇಕಾಗುತ್ತೆ. ತಡ ಆಗುತ್ತೆ ನಾವೇನು ಮಾಡಕ್ಕೆ ಆಗಲ್ಲ. ಯಾವಾಗ ಬರುತ್ತೆ ಎಂದು ಹೇಳಕ್ಕೆ ಆಗಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಸಪ್ಲೈ ಸಮಸ್ಯೆ ಇಲ್ಲ ಎಂದು ಹೇಳಲಿಕ್ಕೆ ಆಗಲ್ಲ.
ಒರಿಸ್ಸಾದಿಂದ ತರಬೇಕು ಅಲ್ಲಿಂದ ತರುವುದು ಕಷ್ಟ. ಎಷ್ಟು ಬೇಕೋ ಅಷ್ಟು ಇಲ್ಲ, ಇರೋದರಲ್ಲಿ ಮ್ಯಾನೇಜ್ ಮಾಡ್ತಿದ್ದೇವೆ ಎಂದರು.
ಇದೇ ವೇಳೆ ರಾಜ್ಯದಲ್ಲಿ ಲಸಿಕೆ ಅಭಾವ ವಿಚಾರವಾಗಿ ಮಾತನಾಡಿ, ಎಷ್ಟು ತಿಂಗಳು ಆಗುತ್ತೋ ಹೇಳಕ್ಕೆ ಆಗಲ್ಲ. ದಿನ, ತಿಂಗಳುಗಳಲ್ಲಿ ಲಸಿಕೆ ಪೂರೈಕೆ ಅಸಾಧ್ಯ, ವರ್ಷಗಳು ಬೇಕಾಗುತ್ತೆ.
ತಡ ಆಗುತ್ತೆ ನಾವೇನು ಮಾಡಕ್ಕೆ ಆಗಲ್ಲ. ಯಾವಾಗ ಬರುತ್ತೆ ಎಂದು ಹೇಳಕ್ಕೆ ಆಗಲ್ಲ. ವ್ಯಾಕ್ಸಿನ್ ಎರಡು ಫೇಸ್ ನೀಡಲಾಗ್ತಿದೆ. ಕೇಂದ್ರದಿಂದ ಬಂದ ಲಸಿಕೆ ವಿತರಣೆ ಮಾಡಿದ್ದೇವೆ.
25 ಲಕ್ಷ ಜನಕ್ಕೆ ಎರಡನೇ ಡೋಸ್ ಹಾಕಿದ್ದೇವೆ. ಕೇಂದ್ರ ಇಡೀ ರಾಜ್ಯಕ್ಕೆ ಹಂಚಿಕೆ ಮಾಡಬೇಕು. ಎರಡನೇ ಡೋಸ್ ಅವರಿಗೆ ಮೊದಲ ಆದ್ಯತೆ. ಹೀಗಾಗಿ ತಡವಾಗ್ತಿದೆ.
86 ಲಕ್ಷ ಜನರಿಗೆ ಫಸ್ಟ್ ಡೋಸ್ ಹಾಕಿದ್ದೇವೆ. ಮೊದಲು ನಾವೇ ಹೋಗಿ ಕರೆದುಕೊಂಡು ಬರಬೇಕಿತ್ತು. ಫೆಬ್ರವರಿ ಮಾರ್ಚ್‍ಯಲ್ಲಿ ಯಾರು ಬರಲಿಲ್ಲ, ಈಗ ಬರ್ತಿದ್ದಾರೆ.
ಮೂರು ಕೋಟಿ ಆರ್ಡರ್ ಮಾಡಿದ್ದೇವೆ. ಏಳು ಲಕ್ಷ ಮಾತ್ರ ನಮಗೆ ವ್ಯಾಕ್ಸಿನ್ ಬಂದಿದೆ ಅದನ್ನ ಕೊಡ್ತಿದ್ದೇವೆ, ಸ್ವಲ್ಪ ತಡವಾಗುತ್ತೆ ಎಂದು ತಿಳಿಸಿದರು.










